ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಳಹಂತದಲ್ಲೇ ಸಂಶೋಧನೆಗೆ ಒತ್ತು ನೀಡಿ’–ಬಸವರಾಜ ಬೊಮ್ಮಾಯಿ

Last Updated 17 ಮೇ 2022, 18:17 IST
ಅಕ್ಷರ ಗಾತ್ರ

ಬೆಂಗಳೂರು: ‘ಯೋಜನೆಯೊಂದರ ನೈಜತೆ ಹಾಗೂ ಸಫಲತೆಯ ಅರಿವಾಗುವುದು ಆರಂಭಿಕ ಹಂತದಲ್ಲಿ. ಹೀಗಾಗಿ ತಳ ಹಂತದಲ್ಲೇ ಸಂಶೋಧನೆಗಳನ್ನು ನಡೆಸಲು ಒತ್ತು ನೀಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭಾರತೀಯ ಉದ್ಯಮ ಒಕ್ಕೂಟ ಹಾಗೂ ಭಾರತೀಯ ನಿರ್ಮಾಣ ಉಪಕರಣಗಳ ಉತ್ಪಾದಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಎಕ್ಸ್‌ಕಾನ್’ ನಿರ್ಮಾಣ ಉಪಕರಣಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ನೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಯುವಕರಲ್ಲಿ ಸ್ವಂತಿಕೆ ಬೆಳೆಸಬೇಕು. ನಾವೀನ್ಯತೆ ಮೈಗೂಡಿಸಿಕೊಳ್ಳುವ ದಿಸೆಯಲ್ಲಿ ಅವರನ್ನು ಪ್ರೋತ್ಸಾಹಿಸಬೇಕು. ದುಡಿಯುವ ವರ್ಗದ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT