ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಷಾದ್ರಿಪುರ ಶಿಕ್ಷಣ ಸಂಸ್ಥೆ: 3,000 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಘಟಿಕೋತ್ಸವ ಸಮಾರಂಭ
Last Updated 3 ಸೆಪ್ಟೆಂಬರ್ 2022, 21:36 IST
ಅಕ್ಷರ ಗಾತ್ರ

ಯಲಹಂಕ: ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪೂರ್ಣಗೊಳಿಸಿದ ಒಟ್ಟು 3,000 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ 8 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸೇರಿ 46 ವಿದ್ಯಾರ್ಥಿಗಳಿಗೆ ಹಾಗೂ 17 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಅಲ್ಲದೆ, ಮೂವರು ವಿದ್ಯಾರ್ಥಿಗಳಿಗೆ ‘ಗೋಪಾಲಕೃಷ್ಣ ಗೋಧಾಮಣಿ’ ದತ್ತಿ ಬಹುಮಾನ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾ ಟಕ ಜನಪದ ಪರಿಷತ್‌ನ ಅಧ್ಯಕ್ಷ ಡಾ.ಟಿ.ತಿಮ್ಮೇಗೌಡ, ‘ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದ್ದು, ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಎಲ್ಲಾ ಅವಕಾಶ ಮತ್ತು ಸಾಧ್ಯತೆಗಳಿಗೆ ದೊಡ್ಡ ಹೆಬ್ಬಾಗಿಲಾಗಿದೆ. ಹಾಗಾಗಿ ಇಂದಿನ ಪದವೀಧರರು ತಮ್ಮ ಮುಂದಿನ ಭವಿಷ್ಯವನ್ನು ಉನ್ನತ ಮಟ್ಟದಲ್ಲಿ ರೂಪಿಸಿಕೊಳ್ಳುವ ಮೂಲಕ ಈ ದೇಶದ ಆಸ್ತಿಯಾಗಬೇಕು’ ಎಂದು ತಿಳಿಸಿದರು.

ಶಿಕ್ಷಣ ತಜ್ಞ ವೂಡೇ.ಪಿ.ಕೃಷ್ಣ, ಶೇಷಾ ದ್ರಿಪುರ ಶಿಕ್ಷಣ ದತ್ತಿಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಉಪಾಧ್ಯಕ್ಷ ಟಿ.ಎಸ್. ಹೆಂಜಾರಪ್ಪ, ಜಂಟಿ ಕಾರ್ಯ ದರ್ಶಿ ಶೇಷ ನಾರಾಯಣ, ಆಡಳಿತ ಸಲಹಾ ಮಂಡಳಿಗಳ ಅಧ್ಯಕ್ಷ ರಾದ ಎಂ.ಎಸ್.ನಟರಾಜ್, ಪ್ರೊ.ಕೆ.ಪಿ. ನರಸಿಂಹಮೂರ್ತಿ, ಪಿ.ಸಿ. ನಾರಾಯಣ, ಡಬ್ಲ್ಯೂ.ಡಿ. ವಿಜಯಕುಮಾರ್, ಡಬ್ಲ್ಯು.ಡಿ. ಅಶೋಕ್, ಪ್ರಾಂಶುಪಾಲ ಎ.ಎಸ್.ಎನ್. ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT