ಬುಧವಾರ, ಮೇ 27, 2020
27 °C
ನೋಟುಗಳ ಮೂಲಕ ಸೋಂಕು ಹರಡುವ ಸಾಧ್ಯತೆ

ಮಾಲ್‌ನಲ್ಲಿ ಕಾರ್ಡ್‌, ಅಂಗಡಿಯಲ್ಲಿ ‘ಕ್ಯಾಶ್‌’

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೋಟುಗಳ ಮೂಲಕ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವ ಕಾರಣದಿಂದ, ನಗರದ ಸೂಪರ್‌ ಮಾರ್ಕೆಟ್‌ಗಳಲ್ಲಿ, ಮಾಲ್‌ಗಳಲ್ಲಿ ಕಾರ್ಡ್‌ಗಳ ಮೂಲಕ ಮಾತ್ರ ಹಣವನ್ನು ಸ್ವೀಕರಿಸಲಾಗುತ್ತಿದೆ. ಆದರೆ, ಸಣ್ಣ ದಿನಸಿ ಅಂಗಡಿಗಳಲ್ಲಿ, ತರಕಾರಿ ಮಳಿಗೆಗಳಲ್ಲಿ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ನಗದು ರೂಪದಲ್ಲಿಯೇ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ.

‘ಅಕ್ಕಿ, ಬೇಳೆ, ತರಕಾರಿ ಸೇರಿ ದಂತೆ ಎಲ್ಲವನ್ನೂ ₹20ರಿಂದ ₹30 ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಎಟಿಎಂಗಳಿಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾರ್ಡ್‌ ಸ್ವೈಪ್‌ ಮಾಡುತ್ತೇನೆ ಎಂದರೂ ಸಣ್ಣ ದಿನಸಿ ಅಂಗಡಿಯವರು ಒಪ್ಪಿಕೊಳ್ಳುತ್ತಿಲ್ಲ’ ಎಂದು ಯಶವಂತಪುರದ ಜಯಪ್ರಕಾಶ್‌ ಅಸಮಾಧಾನ ವ್ಯಕ್ತಪಡಿಸಿದರು. 

‘ಗರಿಷ್ಠ ಮಾರಾಟ ದರಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಸಣ್ಣ ಮಳಿಗೆಯವರು ಬಿಲ್‌ಗಳನ್ನೂ ಕೊಡುತ್ತಿಲ್ಲ. ಕಾರ್ಡ್‌ ಮೂಲಕ ಹಣ ಪಾವತಿಸಲೂ ಒಪ್ಪುತ್ತಿಲ್ಲ’ ಎಂದು ಮಹಾಲಕ್ಷ್ಮೀ ಲೇಔಟ್‌ ನಿವಾಸಿ ರಮೇಶ್‌ ದೂರಿದರು. 

ಕಾರ್ಡ್‌ ಬಳಕೆ: ‘ನೋಟುಗಳು ಹಲವು ಜನರ ಕೈಗಳನ್ನು ದಾಟಿ ಬಂದಿರುತ್ತವೆ. ಇವುಗಳ ಮೂಲಕ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ಕಾರ್ಡ್‌ಗಳ ಮೂಲಕ ಮಾತ್ರ ವಹಿವಾಟು ನಡೆಸುತ್ತಿದ್ದೇವೆ’ ಎಂದು ಮೆಟ್ರೊ ಸೂಪರ್‌ ಮಾರ್ಕೆಟ್‌ನ ಸಿಬ್ಬಂದಿ ಚಿದಾನಂದ್ ಹೇಳಿದರು. 

‘ಕೊರೊನಾ ಸೋಂಕು ಹರಡುವ ಆತಂಕ ಪ್ರಾರಂಭಗೊಂಡ ದಿನದಿಂದಲೇ, ಡಿಜಿಟಲ್‌ ಪಾವತಿಗೆ ಜನ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು