ಶನಿವಾರ, ಜುಲೈ 24, 2021
28 °C
ಕೊರೊನಾ ಸೋಂಕಿತ ಮೃತರ ಸಂಖ್ಯೆ 43ಕ್ಕೆ ಏರಿಕೆ

ಬೆಂಗಳೂರು | ಒಂದೇ ದಿನ 55 ಮಂದಿಗೆ ಕೋವಿಡ್ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿ ನಿಂದ ನಗರದಲ್ಲಿ ಮತ್ತೆ 6 ಮಂದಿ ಮೃತಪಟ್ಟಿರುವುದು ಬುಧವಾರ ದೃಢ ಪಟ್ಟಿದೆ. ಇದರಿಂದಾಗಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಹೊಸದಾಗಿ 55 ಕೋವಿಡ್ ಪ್ರಕರಣಗಳು ವರದಿ ಯಾ ಗಿದ್ದು, ಸೋಂಕಿತರ ಸಂಖ್ಯೆ 827ಕ್ಕೆ ಏರಿಕೆಯಾಗಿದೆ. 

ಬುಧವಾರ ವರದಿಯಾದ ಪ್ರಕರಣಗಳಲ್ಲಿ 14 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 17 ಮಂದಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ಕು ಮಂದಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗಿಲ್ಲ. 

ಹಾಲನಾಯಕನಹಳ್ಳಿಯ ಕೃಷ್ಣಪ್ಪ ನಗರದಲ್ಲಿ 38 ವರ್ಷದ ರೋಗಿಯ ಸಂಪರ್ಕದಿಂದ ಒಂದೇ ಕುಟುಂಬದ ನಾಲ್ವರು ಸೋಂಕಿತರಾಗಿದ್ದಾರೆ. 6 ವರ್ಷದ ಬಾಲಕಿ, 10 ವರ್ಷದ ಬಾಲಕ, 34 ವರ್ಷದ ಮಹಿಳೆ ಹಾಗೂ 68 ವರ್ಷದ ವೃದ್ಧೆಗೆ ಸೋಂಕು ತಗ ಲಿದೆ. ಕುಮಾರಸ್ವಾಮಿ ಲೇಔಟ್‌ನಲ್ಲಿ 45 ವರ್ಷದ ರೋಗಿಯ ಸಂಪರ್ಕ ಹೊಂದಿದ್ದ ಅವರ ಕುಟುಂಬದ 39 ವರ್ಷದ ಮಹಿಳೆ ಹಾಗೂ 2 ವರ್ಷದ ಗಂಡು ಮಗು ಕೋವಿಡ್ ಪೀಡಿತರಾಗಿದ್ದಾರೆ.  ಬೇಗೂರು ಮುಖ್ಯರಸ್ತೆಯ ಹೊಂಗ ಸಂದ್ರ ಬಸ್ ನಿಲ್ದಾಣ ಬಳಿಯ
ಮಹಿಳೆಯೊಬ್ಬಳಿಗೆ ಕೆಲ ದಿನಗಳ ಹಿಂದೆ ಸೋಂಕು ತಗಲಿತ್ತು. ಈಗ ಅವರ ಕುಟುಂಬದ 30 ವರ್ಷದ ಪುರುಷ ಹಾಗೂ 43 ವರ್ಷದ ಮಹಿಳೆ ರೋಗಿಗಳಾಗಿ ಆಸ್ಪತ್ರೆ ಸೇರಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳ ಲುತ್ತಿದ್ದ ಮಂಗಮ್ಮನಪಾಳ್ಯದ 65 ವರ್ಷದ ವೃದ್ಧ ಕಿಮ್ಸ್‌ಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಹೆಬ್ಬಗೋಡಿಯ ವಿನಾಯಕನಗರದ 31ವರ್ಷದ ಪುರುಷ, ದೂರವಾಣಿನಗರದ 55 ವರ್ಷದ ಪುರುಷ, ಅಬ್ಬಿಗೆರೆ ದಿಣ್ಣೆ ಸರ್ಕಲ್‌ನ 67 ವರ್ಷದ ವೃದ್ಧೆ ಹೊಳೆ ನರಸಿಪುರದ ಸೊನ್ನೇನ
ಹಳ್ಳಿಯ 28 ವರ್ಷದ ಯುವತಿ ಸೋಂಕಿತರಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು