ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು, ಆಸ್ಪತ್ರೆ ದಾಖಲಾತಿ ಹೆಚ್ಚಳ

Last Updated 20 ಮಾರ್ಚ್ 2023, 20:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳ ಜತೆಗೆ ಆಸ್ಪತ್ರೆ ದಾಖಲಾತಿಯೂ ಹೆಚ್ಚಳವಾಗಿದ್ದು, ಸದ್ಯ 68 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ.

ಬೆಂಗಳೂರಿನಲ್ಲಿ 53 ಸೇರಿ ರಾಜ್ಯದಲ್ಲಿ 71 ಪ್ರಕರಣಗಳು ಸೋಮವಾರ ವರದಿಯಾಗಿವೆ. ನಗರದಲ್ಲಿ 394 ಸಕ್ರಿಯ ಪ್ರಕರಣಗಳಿವೆ. ಸೋಂಕಿತರಲ್ಲಿ 50 ಮಂದಿ ಸಾಮಾನ್ಯ ಹಾಸಿಗೆ, 13 ಮಂದಿ ಐಸಿಯು ಹಾಗೂ 5 ಮಂದಿ ಎಚ್‌ಡಿಯು ಹಾಸಿಗೆ ಚಿಕಿತ್ಸೆಗೆ ಒಳಗಾಗಿದ್ದಾರೆ. ಸೋಂಕು ದೃಢ ಪ್ರಮಾಣ ಶೇ 7.94ಕ್ಕೆ ತಲುಪಿದೆ.

ವಾರದ ಅವಧಿಯಲ್ಲಿ ದೃಢಪಟ್ಟ ಪ್ರಕರಣಗಳನ್ನು ಬಿಬಿಎಂಪಿ ವಾರ್‌ ರೂಮ್ ವಿಶ್ಲೇಷಿಸಿದೆ. ಏಳು ದಿನ ಗಳಲ್ಲಿ 5,301 ಕೋವಿಡ್ ಪರೀಕ್ಷೆ
ಗಳನ್ನು ನಡೆಸಲಾಗಿದ್ದು, 413 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ 343 ಮಂದಿ ಚೇತರಿಸಿಕೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ.

10 ದಿನಗಳಿಂದ ಬೆಳ್ಳಂದೂರು, ಎಚ್.ಎಸ್.ಆರ್. ಲೇಔಟ್‌ನಲ್ಲಿ ಸರಾಸರಿ ಮೂರು ಪ್ರಕರಣಗಳು, ದೊಡ್ಡ ನೆಕ್ಕುಂದಿ, ಹೂಡಿ, ವರ್ತೂರು, ಅರಮನೆ ನಗರ, ಕೊನೇನ ಅಗ್ರಹಾರ, ಹೆಮ್ಮಿಗೆಪುರ, ಕೊಟ್ಟಿಗೆಪಾಳ್ಯ ಹಾಗೂ ಹಗದೂರು ವಾರ್ಡ್‌ನಲ್ಲಿ ತಲಾ 2 ಪ್ರಕರಣಗಳು ವರದಿಯಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT