ಗುರುವಾರ , ಅಕ್ಟೋಬರ್ 6, 2022
26 °C

ಕೊರಿಯರ್ ಕಚೇರಿಗಳ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೊರ ರಾಜ್ಯಗಳಿಂದ ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳು ಸರಬರಾಜು ಆಗುತ್ತಿರುವ ಅನುಮಾನದ ಮೇರೆಗೆ ಕೇಂದ್ರ ವಿಭಾಗದ ಕೊರಿಯರ್ ಕಚೇರಿಗಳ ಮೇಲೆ ಪೊಲೀಸರು ಬುಧವಾರ ದಿಢೀರ್ ದಾಳಿ ನಡೆಸಿದರು.

ವಿಶಾಖಪಟ್ಟಣದಿಂದ ಬೆಂಗಳೂರಿಗೆ ಗಾಂಜಾ ಹಾಗೂ ಇತರ ಮಾದಕ ವಸ್ತುಗಳು ಪೂರೈಕೆಯಾಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿವೆ. ಡ್ರಗ್ಸ್‌ ಪೂರೈಕೆದಾರರು ಅನುಮಾನ ಬರದಂತೆ ಕೊರಿಯರ್ ಮೂಲಕ ಡ್ರಗ್ಸ್‌ ಸಾಗಿಸುವ ಮಾರ್ಗ ಕಂಡುಕೊಂಡಿದ್ದರು.

ಕೇಂದ್ರ ವಿಭಾಗದ ವಿವೇಕನಗರ, ಅಶೋಕನಗರ, ಸಂಪಂಗಿ ರಾಮನಗರ, ಸದಾಶಿವನಗರ, ಶೇಷಾದ್ರಿಪುರ, ವೈಯಾಲಿಕಾವಲ್‌ ಭಾಗದಲ್ಲಿ ಹೆಚ್ಚಾಗಿ ಮಾದಕ ವಸ್ತುಗಳು ಸರಬರಾಜು ಆಗುತ್ತಿರುವ ಕುರಿತು ಮಾಹಿತಿ ಇದ್ದಿದ್ದರಿಂದ ಈ ಭಾಗದಲ್ಲಿರುವ ಕೊರಿಯರ್ ಕಚೇರಿಗಳ ಮೇಲೆ ದಾಳಿ ನಡೆಸಿದರು. 12 ಶ್ವಾನಗಳಿಂದ ವಿವಿಧೆಡೆ ತಪಾಸಣೆ ನಡೆಯಿತು.

‘ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿ ಡ್ರಗ್ಸ್‌ ಪೂರೈಕೆ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಡ್ರಗ್ಸ್‌ ಪೂರೈಸುವವರು ಹಾಗೂ ಖರೀದಿಸುವವರ ಮೇಲೆ ನಿಗಾ ಇಡಲಾಗಿದೆ’ ಎಂದು ದಾಳಿಯ ನೇತೃತ್ವ ವಹಿಸಿದ್ದ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು