ಬುಧವಾರ, ಮಾರ್ಚ್ 29, 2023
32 °C
'ಪೋಮ್ ಎಕ್ಸ್' ಕಂಪನಿ ತೆರೆದಿದ್ದ ಆರೋಪಿಗಳು

‘ಕ್ರಿಪ್ಟೊ’ ಹೂಡಿಕೆ ವಂಚನೆ ಜಾಲ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಪ್ಟೊ ಕರೆನ್ಸಿ ರೂಪದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಜಾಲದಲ್ಲಿ ಸಕ್ರಿಯರಾಗಿದ್ದ ಮೂವರನ್ನು ಸೆರೆ ಹಿಡಿದಿದ್ದಾರೆ.

‘ಎಚ್‌ಎಸ್‌ಆರ್ ಬಡಾವಣೆ ನಿವಾಸಿಗಳಾದ ರಾಘವೇಂದ್ರ, ನಾಗರಾಜು ಹಾಗೂ ಶಿವಮೂರ್ತಿ ಬಂಧಿತರು. ಕೃತ್ಯ
ದಲ್ಲಿ ಭಾಗಿಯಾಗಿದ್ದ ನಾಲ್ವರು ತಲೆಮರೆಸಿಕೊಂಡಿದ್ದಾರೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪೋಮ್ ಎಕ್ಸ್’ ಎಂಬ ಕಂಪನಿ ತೆರೆದಿದ್ದ ಆರೋಪಿಗಳು, ಅದರ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದರು’ ಎಂದೂ ತಿಳಿಸಿದರು.

‘ಈ ಹಿಂದೆಯೂ ‘ಇಎಸ್‌ಪಿಎನ್ ಗ್ಲೋಬಲ್ (ಈ-ಒರಾಕಲ್)’ ಎಂಬ ಕಂಪನಿ‌ ಸ್ಥಾಪಿಸಿದ್ದರು. ಚೈನ್‌ ಲಿಂಕ್ ಮಾದರಿಯಲ್ಲಿ ನೂರಾರು ಮಂದಿಯಿಂದ ಹಣ ಹೂಡಿಕೆ‌ ಮಾಡಿಸಿಕೊಂಡು ವಂಚಿಸಿದ್ದರು. ಆ‌ ಕಂಪನಿ ಬಂದ್ ಮಾಡಿದ್ದ ಆರೋಪಿಗಳು, ಹೊಸದಾಗಿ ‘ಪೋಮ್ ಎಕ್ಸ್’ ಕಂಪನಿ ತೆರೆದಿದ್ದರು. ಆನ್‌ಲೈನ್‌ನಲ್ಲಿ ಕ್ರಿಪ್ಟೊ‌ ಕರೆನ್ಸಿ ಖರೀದಿಸಿ, ಅದನ್ನು ಚೈನ್ ಲಿಂಕ್ ಮೂಲಕ ಒಬ್ಬರಿಂದ ಒಬ್ಬರಿಗೆ ಮಾರಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ‌ ಆರೋಪಿಗಳು‌ ಜಾಹೀರಾತು ನೀಡಿದ್ದರು’ ಎಂದರು.

ಹೋಟೆಲ್‌ನಲ್ಲಿ‌ ಕಾರ್ಯಕ್ರಮ: ‘ಯಲಹಂಕದಲ್ಲಿರುವ‌ ಹೋಟೆಲೊಂದರಲ್ಲಿ ಅ. 26ರಂದು ಆರೋಪಿಗಳು ಕಾರ್ಯಕ್ರಮ ಏರ್ಪಡಿಸಿದ್ದರು. ಪೋಮ್ ಎಕ್ಸ್ ಕಂಪನಿ ಹಾಗೂ‌ ಹೂಡಿಕೆ‌ ಬಗ್ಗೆ ಪ್ರಚಾರ ಮಾಡಿದ್ದರು’ ಎಂದು ಪೊಲೀಸ್ ಅಧಿಕಾರಿ‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು