ಬೆಂಗಳೂರು: ನಗರದಲ್ಲಿ ಕುಳಿತು ಅಮೆರಿಕದ ಪ್ರಜೆಗಳು ಹಾಗೂ ದೇಶದ ಕೆಲವು ರಾಜ್ಯಗಳ ನಾಗರಿಕರಿಗೆ ವಂಚಿಸುತ್ತಿದ್ದ ವೈಟ್ಫೀಲ್ಡ್ ಕಾಲ್ಸೆಂಟರ್ ಮೇಲೆ ಸಿಐಡಿಯ ಸೈಬರ್ ಕಮಾಂಡ್ ವಿಶೇಷ ಘಟಕ ಹಾಗೂ ವೈಟ್ಫೀಲ್ಡ್ ಸೈಬರ್ ಅಪರಾಧ ಠಾಣೆಯ ಪೊಲೀಸರು ದಾಳಿ ನಡೆಸಿ 21 ಆರೋಪಿಗಳನ್ನು ಬಂಧಿಸಿದ್ದಾರೆ.

ರಂಜಿತ್ ಸೇರಿದಂತೆ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಖಚಿತ ಮಾಹಿತಿ ಆಧರಿಸಿ ವೈಟ್ಫೀಲ್ಡ್ ಮುಖ್ಯರಸ್ತೆಯ ವರ್ತೂರು ಕೋಡಿಯ ಸಿಗ್ಮಾ ಸಾಫ್ಟ್ಟೆಕ್ ಪಾರ್ಕ್ ಡೆಲ್ಟಾ ಕಟ್ಟಡದ ಆರನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಮಸ್ಕ್ ಕಮ್ಯುನಿಕೇಷನ್’ ಹೆಸರಿನ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಕೃತ್ಯಕ್ಕೆ ಬಳಸುತ್ತಿದ್ದ ಲ್ಯಾಪ್ಟಾಪ್, ಮೊಬೈಲ್, ಡಿಜಿಟಲ್ ಸಾಧನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಮೈಕ್ರೊಸಾಫ್ಟ್ ತಾಂತ್ರಿಕ ಸಿಬ್ಬಂದಿ ಎಂದು ಹೇಳಿಕೊಂಡು ವಂಚನೆ ನಡೆಸುತ್ತಿದ್ದರು. ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ಗಳಾದ 66, 66(ಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318(4) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಈ ತಂಡದವರು ಅಮೆರಿಕ ನಾಗರಿಕರ ಡಾಲರ್ಅನ್ನು ಎಗರಿಸುತ್ತಿದ್ದರು. ಆರೋಪಿಗಳು ಸಂಘಟಿತ ಅಪರಾಧ ಎಸಗುತ್ತಿದ್ದರು’ ಎಂದು ಸೈಬರ್ ಪೊಲೀಸರು ಹೇಳಿದರು.

‘ಕಾಲ್ ಸೆಂಟರ್ ಸ್ಥಾಪಿಸಿಕೊಂಡಿದ್ದ ಆರೋಪಿಗಳು, ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿ ವಂಚಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಅಮೆರಿಕದಲ್ಲಿ ನೆಲಸಿರುವ ಪ್ರಜೆಗಳಿಗೆ ಕಳುಹಿಸುತ್ತಿದ್ದರು. ಜಾಹೀರಾತು ತೆರೆದ ತಕ್ಷಣವೇ ಲ್ಯಾಪ್ಟಾಪ್ ಹ್ಯಾಕ್ ಆಗಿದೆ ಎಂದು ತೋರಿಸುವಂತೆ ರೂಪಿಸಿದ್ದರು. ವಾಸ್ತವವಾಗಿ ಆ ರೀತಿ ಹ್ಯಾಕ್ ಆಗುತ್ತಿರಲಿಲ್ಲ. ಹ್ಯಾಕ್ ಆಗಲಿದೆ ಎಂದು ಭಾವಿಸುತ್ತಿದ್ದ ಪ್ರಜೆಗಳು ಆತಂಕಗೊಳ್ಳುತ್ತಿದ್ದರು. ಮೈಕ್ರೊಸಾಫ್ಟ್ ತಾಂತ್ರಿಕ ಸಿಬ್ಬಂದಿ ಸಂಪರ್ಕಿಸುವಂತೆ ತಿಳಿಸಿ, ನಕಲಿ ಕಾಲ್ ಸೆಂಟರ್ಗೆ ಕರೆಯನ್ನು ವರ್ಗಾವಣೆ ಮಾಡುತ್ತಿದ್ದರು. ಲ್ಯಾಪ್ಟಾಪ್ ಹ್ಯಾಕ್ ಆಗಿದ್ದು ತಮ್ಮ ಮೇಲೆ ಪ್ರಕರಣವೂ ದಾಖಲಾಗಿದೆ ಎಂಬುದಾಗಿ ಕಾಲ್ ಸೆಂಟರ್ ಸಿಬ್ಬಂದಿ ವಿದೇಶಿ ಪ್ರಜೆಗಳನ್ನು ಭೀತಿಗೊಳಿಸುತ್ತಿದ್ದರು. ಕರೆಯನ್ನು ಫೆಡರಲ್ ಟ್ರೇಡ್ ಕಮಿಷನ್ಗೆ ವರ್ಗಾವಣೆ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕಾಲ್ ಸೆಂಟರ್ನ ಸಿಬ್ಬಂದಿಯೇ ಫೆಡರಲ್ ಟ್ರೇಡ್ ಕಮಿಷನ್ ಅಧಿಕಾರಿಯಂತೆ ಮಾತನಾಡುತ್ತಿದ್ದರು. ಎಸ್ಎಸ್ಎ ನಂಬರ್ ತಿಳಿಸುವಂತೆ ಸೂಚಿಸುತ್ತಿದ್ದರು. ಜನ್ಮದಿನಾಂಕ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದರು. ಎರಡರಿಂದ ಐದು ಸಾವಿರ ಡಾಲರ್ ವರೆಗೆ ಕೇಳುತ್ತಿದ್ದರು. ಕರೆನ್ಸಿಯನ್ನು ಬೇರೆ ಬೇರೆ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.