ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಗರಿಗೆದರಿದ ಖರೀದಿ

Last Updated 13 ನವೆಂಬರ್ 2020, 21:59 IST
ಅಕ್ಷರ ಗಾತ್ರ

ಬೆಂಗಳೂರು: ಹಣತೆಯ ಹಬ್ಬ ದೀಪಾವಳಿಗೆ ಕ್ಷಣಗಣನೆ ಆರಂಭವಾಗಿದೆ. ನಗರದೆಲ್ಲೆಡೆ ಶುಕ್ರವಾರದಿಂದಲೇ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಗರಿಗೆದರಿದೆ.

ಕೆ.ಆರ್. ಮಾರುಕಟ್ಟೆಯಲ್ಲಿ ಶುಕ್ರವಾರ ಮಧ್ಯಾಹ್ನದವರೆಗೆ ವ್ಯಾಪಾರ ನೀರಸವಾಗಿತ್ತು. ಸಂಜೆ ವೇಳೆಗೆ ಗ್ರಾಹಕರು ಮಾರುಕಟ್ಟೆಯತ್ತ ದೌಡಾಯಿಸಿದರು. ಹಬ್ಬಕ್ಕೆ ಮುನ್ನವೇ ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದರು. ಗ್ರಾಹಕರು ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ಹೂವಿನ ದರಗಳೂ ಏರತೊಡಗಿದವು.

ನಗರದ ಮಲ್ಲೇಶ್ವರ, ಬಸವನಗುಡಿ, ಗಾಂಧಿ ಬಜಾರ್, ಬನಶಂಕರಿ, ಜೆ.ಪಿ ನಗರ, ಇಂದಿರಾನಗರ, ಜಯನಗರ, ಯಲಹಂಕ ಸೇರಿದಂತೆ ವಿವಿಧೆಡೆ ಹಬ್ಬಕ್ಕಾಗಿ ರಸ್ತೆಬದಿ ಕಿರು ಮಾರುಕಟ್ಟೆಗಳು ತಲೆ ಎತ್ತಿವೆ. ಮಣ್ಣಿನ ದೀಪಗಳನ್ನು ಮಾರುವ ತಳ್ಳುವ ಗಾಡಿಗಳು ಪ್ರತಿ ರಸ್ತೆಯಲ್ಲೂ ಕಂಡು ಬಂತು.

‘ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹೂವು ಖರೀದಿಗೆ ಬರುತ್ತಿದ್ದಾರೆ. ಪ್ರತಿ ಹಬ್ಬದಂತೆ ದೀಪಾವಳಿಗೂ ಹೂಗಳ ದರ ಏರಿದೆ. ಆದರೆ, ಈ ಬಾರಿ ದಾಖಲೆಮಟ್ಟದಲ್ಲಿ ದುಬಾರಿಯಾಗಿಲ್ಲ. ಶನಿವಾರದ ವೇಳೆಗೆ ದರಗಳು ಇನ್ನಷ್ಟು ಏರುವ ನಿರೀಕ್ಷೆ ಇದೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕ ಹರೀಶ್ ತಿಳಿಸಿದರು.

‘ತರಕಾರಿ ದರಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಒಂದು ವಾರದಿಂದ ದರಗಳು ಸ್ಥಿರವಾಗಿವೆ. ಕ್ಯಾರೆಟ್, ಬೀಟ್‍ರೂಟ್, ಆಲೂಗಡ್ಡೆ, ಈರುಳ್ಳಿ ಬಿಟ್ಟರೆ, ಉಳಿದ ತರಕಾರಿ ದರಗಳೆಲ್ಲ ಕಡಿಮೆ ಇವೆ. ಸೊಪ್ಪಿನ ದರಗಳೆಲ್ಲ ಪ್ರತಿ ಕಟ್ಟಿಗೆ ₹10ರ ಒಳಗಿದೆ’ ಎಂದು ತರಕಾರಿ ಮತ್ತು ಸೊಪ್ಪಿನ ವ್ಯಾಪಾರಿ ಕುಮಾರ್ ಮಾಹಿತಿ ನೀಡಿದರು.

ತರಹೇವಾರಿ ಹಣತೆಗಳು: ದೀಪಾವಳಿ ಯಂದು ಮನೆಯಲ್ಲೆಲ್ಲ ದೀಪಗಳನ್ನು ಹಚ್ಚುವುದು ವಾಡಿಕೆ. ಅದಕ್ಕಾಗಿ ಗ್ರಾಹಕರನ್ನು ಮೆಚ್ಚಿಸುವಂತಹ ವಿನ್ಯಾಸಮಯ ದೀಪಗಳು ಮಾರುಕಟ್ಟೆಯಲ್ಲಿ ಲಭ್ಯ. ಮಣ್ಣಿನ ದೀಪಗಳು ಮಾತ್ರವಲ್ಲದೆ, ಸೆರಾಮಿಕ್, ಪಿಂಗಾಣಿ ಹಾಗೂ ಸಗಣಿಯಿಂದ ತಯಾರಿಸಿರುವ ಗೋಮಯ ದೀಪಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಿದ್ದಾರೆ.

ಮಳಿಗೆಗಳಲ್ಲಿ ವರ್ಣಮಯ ಆಕಾಶಬುಟ್ಟಿಗಳು: ದೀಪಾವಳಿ ಆಚರಣೆ ವೇಳೆ ಮನೆಯಂಗಳದಲ್ಲಿ ಆಕಾಶಬುಟ್ಟಿಗಳನ್ನು ನೇತು ಹಾಕುತ್ತಾರೆ. ಈ ಬಾರಿ ಮಾರುಕಟ್ಟೆಗೆ ವಿಭಿನ್ನ ಶೈಲಿಯ ಆಕಾಶ ಬುಟ್ಟಿಗಳ ಬಂದಿವೆ. ಸಣ್ಣ ಗಾತ್ರದ ಆಕಾಶ ಬುಟ್ಟಿ ಒಂದರ ದರ ₹80ರಿಂದ ಆರಂಭವಾಗಿ ಗಾತ್ರಕ್ಕೆ ಅನುಗುಣವಾಗಿ ₹800ರವರೆಗಿನ ಬುಟ್ಟಿಗಳು ಮಾರಾಟಕ್ಕಿವೆ.

ಗುಲಾಬ್ ರಂಗೀಲಾ, ನಕ್ಷತ್ರ ಮಾದರಿ, ಪ್ಯಾರಾಚೂಟ್, ಬಲೂನ್, ಚೆಂಡಿನಾಕಾರ, ಹೃದಯಾಕಾರ, ತಾವರೆ, ಗುಲಾಬಿ, ನಕ್ಷತ್ರಾಕಾರ ಹಾಗೂ ಬಿದಿರಿನಿಂದ ತಯಾರಿಸಿದ ಪರಿಸರ ಸ್ನೇಹಿ ಹಾಗೂ ವರ್ಣಮಯ ಆಕಾಶಬುಟ್ಟಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ದರಗಳ ಪಟ್ಟಿ (ಪ್ರತಿ ಕೆ.ಜಿ.ಗೆ ₹ಗಳಲ್ಲಿ)

ಹೂವಿನ ದರ

ಕನಕಾಂಬರ;1,200

ಮಲ್ಲಿಗೆ;1,000

ಕಾಕಡ;500

ಗುಲಾಬಿ;320

ಸೇವಂತಿಗೆ;300

ಗೆನ್ನೇರಿ;200

ಪತ್ರೆ;200
************************
ಹಣ್ಣು;ಹಾಪ್‍ಕಾಮ್ಸ್;ಚಿಲ್ಲರೆ ದರ

ಸೇಬು;132;120

ದ್ರಾಕ್ಷಿ;96;88

ದಾಳಿಂಬೆ;169;97

ಮೂಸಂಬಿ;86;70

ಕಿತ್ತಳೆ;53;55

ಬಾಳೆಹಣ್ಣು;69;60

ಸೀತಾಫಲ;46;50

ಸಪೋಟ;49;60
****************

ತರಕಾರಿ;ಹಾಪ್‍ಕಾಮ್ಸ್ ದರ;ಸಗಟು ದರ

ಬೆಳ್ಳುಳ್ಳಿ;175;110

ಕ್ಯಾರೆಟ್;74;60

ಈರುಳ್ಳಿ;78;80

ಶುಂಠಿ;50;30

ಮೆಣಸಿನಕಾಯಿ;50;30

ಬೀಟ್‍ರೂಟ್;42;20

ಬೆಂಡೆಕಾಯಿ;34;20

ಆಲೂಗಡ್ಡೆ;62;40

ಬೀನ್ಸ್;28;16

ಟೊಮೆಟೊ;25;20

ಬದನೆ;40;20

ಮೂಲಂಗಿ;25;10
***********************

ಸೊಪ್ಪು;ಹಾಪ್‍ಕಾಮ್ಸ್ (ಕೆ.ಜಿ.ಗೆ);ಸಗಟು(ಪ್ರತಿ ಕಟ್ಟಿಗೆ)

ಕೊತ್ತಂಬರಿ;38;8

ದಂಟು;50;8

ಮೆಂತ್ಯೆ;70;8

ಪಾಲಕ್;66;10

ಸಬ್ಬಕ್ಕಿ;50;6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT