ಬೆಂಗಳೂರು: 71 ವರ್ಷದ ವೃದ್ಧರೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು ₹1.13 ಕೋಟಿ ಸುಲಿಗೆ ನಡೆಸಿದ್ದು, ದಕ್ಷಿಣ ವಿಭಾಗದ ಸೈಬರ್ ಅಪರಾಧ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ.

ತುರಹಳ್ಳಿ ಅರಣ್ಯದ ಬಳಿಯ ಬ್ರಿಡ್ಜ್ ಒಮೆಗಾ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ನೆಲಸಿರುವ ಮೋಹನ್ ನಾಡಿಗ ಅವರಿಗೆ ಸೈಬರ್ ವಂಚಕರು ವಂಚನೆ ಮಾಡಿದ್ದಾರೆ.

ಮೋಹನ್ ಅವರು ನೀಡಿದ ದೂರು ಆಧರಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ–2008 ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318(4), 319(2)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ಹೇಳಿದರು.

ಏಪ್ರಿಲ್ 7ರಂದು ದೂರುದಾರಿಗೆ ವಾಟ್ಸ್ಆ್ಯಪ್ ಕರೆ ಮಾಡಿದ್ದ ಸೈಬರ್ ವಂಚಕರು, ಮಹಾರಾಷ್ಟ್ರದ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ಗುರುತಿನ ಚೀಟಿ ದುರ್ಬಳಕೆ ಮಾಡಿಕೊಂಡು ವಂಚನೆ ನಡೆಸಿರುವ ಅನುಮಾನವಿದೆ ಎಂದು ದೂರುದಾರರನ್ನು ಬೆದರಿಸಿದ್ದರು. ಐ.ಡಿ ಕಾರ್ಡ್, ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಬೇಕಿದೆ ಎಂಬುದಾಗಿ ಹೇಳಿದ್ದರು. ಹೆದರಿ ಮೋಹನ್ ಅವರು ಬ್ಯಾಂಕ್ ವಿವರಗಳನ್ನು ಸೈಬರ್ ವಂಚಕರಿಗೆ ನೀಡಿದ್ದರು. ಅದಾದ ಮೇಲೆ ವಿಡಿಯೊ ಕರೆ ಮಾಡಿದ್ದ ಅಪರಿಚಿತರು, ಮೋಹನ್ ಅವರನ್ನು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿದ್ದರು. ಅಲ್ಲದೇ ಎಲ್ಲ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ₹1.13 ಕೋಟಿಯನ್ನು ವರ್ಗಾವಣೆ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

‘ಈ ಕುರಿತು ಕೆಲವು ದಿನಗಳ ಬಳಿಕ ಪುತ್ರಿಗೆ ವಿಷಯ ತಿಳಿಸಿದ್ದೆ. ಆಗ ವಂಚನೆಗೆ ಒಳಗಾಗಿರುವುದು ಗೊತ್ತಾಯಿತು’ ಎಂದು ಮೋಹನ್ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.