ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರ ಪತ್ನಿ, ವೈದ್ಯೆ ಪ್ರೀತಿ ಅವರಿಗೆ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ₹14 ಲಕ್ಷ ದೋಚಿದ್ದು, ಅದನ್ನು ವಾಪಸ್ ಕೊಡಿಸುವಲ್ಲಿ ಸೈಬರ್ ಅಪರಾಧ ಠಾಣೆಯ ಪೊಲೀಸರು ಯಶಸ್ವಿ ಆಗಿದ್ದಾರೆ.

ವಂಚನೆಗೊಳಗಾದ ಒಂದು ಗಂಟೆಯೊಳಗೆ (ಗೋಲ್ಡನ್ ಅವರ್) ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿಯಲ್ಲಿ ಪ್ರೀತಿ ಅವರು ದೂರು ದಾಖಲಿಸಿದ್ದರು. ತತ್ಕ್ಷಣವೇ ದೂರು ದಾಖಲಿಸಿದ್ದರಿಂದಾಗಿ, ವಂಚಕರ ಖಾತೆಗೆ ಸಂದಾಯ ಆಗಿದ್ದ ಹಣವನ್ನು ಯಶಸ್ವಿಯಾಗಿ ಹಿಂಪಡೆಯಲಾಗಿದೆ ಎಂದು ಸೈಬರ್ ಪೊಲೀಸರು ಹೇಳಿದರು.

ಆ.26ರಂದು ಪ್ರೀತಿ ಅವರಿಗೆ ಕರೆ ಮಾಡಿದ್ದ ಸೈಬರ್ ವಂಚಕರು ಮುಂಬೈ ಸೈಬರ್ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಕೃತ್ಯ ಎಸಗಿದ್ದರು.

‘ನಿಮ್ಮ ಕೆಲವು ದಾಖಲೆಗಳನ್ನು ಸದ್ಭತ್ ಖಾನ್ ಎಂಬಾತ ಬಳಸಿಕೊಂಡು ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾದಲ್ಲಿ ಕಾನೂನುಬಾಹಿರ ಕೃತ್ಯ ಎಸಗಿದ್ದಾನೆ’ ಎಂಬುದಾಗಿ ಬೆದರಿಸಿದ್ದರು.

‘ಆರೋಪಿ ಸದ್ಬತ್ ಖಾನ್ನನ್ನು ಬಂಧಿಸಲಾಗಿದ್ದು, ನಿಮ್ಮ ಹೆಚ್ಚಿನ ವಿಚಾರಣೆಯ ಅಗತ್ಯವಿದೆ’ ಎಂದು ವಾಟ್ಸ್ಆ್ಯಪ್ ಮೂಲಕ ವಿಡಿಯೊ ಕರೆ ಮಾಡಿ ವೈಯಕ್ತಿಕ ದಾಖಲೆಗಳನ್ನು ವಂಚಕರು ಪಡೆದುಕೊಂಡಿದ್ದರು. ‘ನಿಮ್ಮ ಖಾತೆ ಅಕ್ರಮವಾಗಿದ್ದು, ಆರ್ಬಿಐನಿಂದ ಪರಿಶೀಲನೆ ನಡೆಸಬೇಕಿರುವುದರಿಂದ ₹14 ಲಕ್ಷವನ್ನು ನಾವು ಹೇಳಿದ ಖಾತೆಗೆ ವರ್ಗಾಯಿಸಿ’ ಎಂಬುದಾಗಿ ಸೈಬರ್ ವಂಚಕರು ಸೂಚಿಸಿದ್ದರು. ಪರಿಶೀಲನೆ ಪೂರ್ಣಗೊಳಿಸಿ 45 ನಿಮಿಷದಲ್ಲಿ ಹಣ ವಾಪಸ್ ನೀಡಲಾಗುವುದು. ಹಣ ನೀಡದಿದ್ದರೆ ಬಂಧಿಸಲಾಗುವುದು ಎಂಬುದಾಗಿ ಪ್ರೀತಿ ಅವರನ್ನು ಬೆದರಿಸಿದ್ದರು. ಸೈಬರ್ ಕಳ್ಳರ ಮಾತಿನಿಂದ ಆತಂಕಗೊಂಡಿದ್ದ ಪ್ರೀತಿ ಅವರು ತಮ್ಮ ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ವಂಚಕರು ಸೂಚಿಸಿದ್ದ ಯೆಸ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಹಣ ಪಾವತಿಸಿದ ಬಳಿಕ ವಂಚನೆ ಆಗಿರುವುದು ಪ್ರೀತಿ ಅವರಿಗೆ ಗೊತ್ತಾಗಿ ತಕ್ಷಣವೇ ಪಶ್ಚಿಮ ವಿಭಾಗದ ಸೈಬರ್ ಅಪರಾಧ ಠಾಣೆಗೆ ಮಾಹಿತಿ ನೀಡಿದ್ದರು.

‘ಪ್ರೀತಿ ಅವರಿಂದ ರಾಷ್ಟ್ರೀಯ ಸೈಬರ್ ಸಹಾಯವಾಣಿಗೆ (1930) ಕರೆ ಮಾಡಿಸಿ ದೂರು ದಾಖಲಿಸಲಾಗಿತ್ತು. ವರ್ಗಾವಣೆಯಾದ ಬ್ಯಾಂಕ್ ಖಾತೆಯಲ್ಲಿದ್ದ ಹಣದ ವಹಿವಾಟು ಸ್ಥಗಿತ (ಫ್ರೀಜ್) ಮಾಡಿಸಿದ್ದೆವು. ನಂತರ, ಸೆ.3ರಂದು ನ್ಯಾಯಾಲಯದಿಂದ ಆದೇಶ ಪಡೆದು ವಂಚಕರ ಖಾತೆ ಸೇರಿದ್ದ ₹14 ಲಕ್ಷವನ್ನು ಪ್ರೀತಿ ಅವರ ಖಾತೆಗೆ ಮರು ವರ್ಗಾವಣೆ ಮಾಡಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು ಗಾಬರಿಗೊಂಡು ಸಮಯ ವ್ಯರ್ಥ ಮಾಡದೇ (ಒಂದು ಗಂಟೆಯ ಒಳಗಾಗಿ) ರಾಷ್ಟ್ರೀಯ ಸೈಬರ್ ಸಹಾಯವಾಣಿ (ಎನ್ಸಿಆರ್ಪಿ) 1930ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು. ಸಮೀಪದ ಠಾಣೆಗೆ ತೆರಳಿ ತ್ವರಿತವಾಗಿ ದೂರು ದಾಖಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.