ಬೆಂಗಳೂರು: ಇಂದಿರಾನಗರದ ಕದಿರಯ್ಯನ ಪಾಳ್ಯದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ರಿಶಾನ್ ಎಂಬ ನಾಲ್ಕು ವರ್ಷದ ಮಗುವಿನ ಮೇಲೆ ನಾಯಿ ದಾಳಿ ನಡೆಸಿ, ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.

ಮಗುವಿನ ರಕ್ಷಣೆಗೆ ಧಾವಿಸಿದ ತಂದೆಗೂ ಕಚ್ಚಿದೆ. ಗಾಯಗೊಂಡಿರುವ ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಜನವರಿ 5ರಂದು ಘಟನೆ ನಡೆದಿದ್ದು, ನಾಯಿ ಸಾಕಿಕೊಂಡಿದ್ದ ಮಂಗೇಶ್ವರಿ ಹಾಗೂ ಅವರ ಪುತ್ರ ಸಂಜಯ್ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದಿರಯ್ಯನ ಪಾಳ್ಯದಲ್ಲಿ ಕೇರಳದ ರಿಶಾದ್ ದಂಪತಿ, ಪುತ್ರ ರಿಶಾನ್ ವಾಸವಿದ್ದಾರೆ. ಅದೇ ಕಟ್ಟಡದಲ್ಲಿ ವಾಸವಿದ್ದ ಮಂಗೇಶ್ವರಿ ಹಾಗೂ ಅವರ ಪುತ್ರ ಸಂಜಯ್ ನಾಯಿ ಸಾಕಿದ್ದರು. ಜನವರಿ 5ರಂದು ಮನೆ ಬಳಿ ಆಟವಾಡುತ್ತಿದ್ದ ರಿಶಾನ್ನನ್ನು ಮೆಟ್ಟಿಲು ಮೇಲೆ ಎಳೆದೊಯ್ದ ನಾಯಿ, ಕಚ್ಚಲಾರಂಭಿಸಿದೆ.

ಮಗನ ಚೀರಾಟ ಕೇಳಿದ ತಂದೆ ರಿಶಾದ್ ಓಡಿ ಹೋಗಿ ನಾಯಿಯ ಬಾಯಿಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ರಿಶಾದ್ ಅವರಿಗೂ ಸಹ ಕಚ್ಚಿ ಗಾಯಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.