ಬುಧವಾರ, ಜೂಲೈ 8, 2020
22 °C

2 ತಿಂಗಳು ಶಾಲೆ ಆರಂಭ ಬೇಡ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದರಾಮಯ್ಯ

ಬೆಂಗಳೂರು: ‘ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮೀರಿ ಹರಡುತ್ತಿರುವುದರಿಂದ ಇನ್ನೂ ಎರಡು ತಿಂಗಳು ಶಾಲೆ ಆರಂಭಿಸುವುದು ಸರಿಯಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.‌

‘ಶಾಲೆಗಳನ್ನು ಆರಂಭಿಸುವ ವಿಷಯ ದಲ್ಲಿ ಅವಸರ ಬೇಡ. ಜುಲೈನಲ್ಲಿ ಶಾಲೆ ಆರಂಭ ಎಂಬ ಸುದ್ದಿ ಕೇಳಿ ಪೋಷಕರು ಬಹಳ ಆತಂಕದಿಂದಿದ್ದಾರೆ. ಬ್ರಿಟನ್‌, ಫ್ರಾನ್ಸ್‌, ಇಟಲಿಯಲ್ಲಿ ಶಾಲೆ ಆರಂಭಿಸಿದ ಬಳಿಕ ಕೊರೊನಾ ಸೋಂಕು ತಗುಲಿ ರುವುದು ವರದಿಯಾಗಿದೆ. ಹೀಗಾಗಿ ಎರಡು ತಿಂಗಳ ಬಳಿಕ ಪರಿಸ್ಥಿತಿ ಅಧ್ಯಯನ ಮಾಡಿ ಶಾಲೆ ಆರಂಭದ ಬಗ್ಗೆ ಯೋಜನೆ ರೂಪಿಸಬಹುದು’ ಎಂದು ಅವರು ಗುರುವಾರ ಟ್ವೀಟ್‌ ಮಾಡಿದ್ದಾರೆ.

ಮರಳಿ ಕಾಂಗ್ರೆಸ್‌ಗೆ, ಸಮಿತಿ ರಚನೆ: ಕಾಂಗ್ರೆಸ್‌ ಪಕ್ಷ ಮತ್ತೆ ಸೇರಲು ಬಯಸುವವರು ಹಾಗೂ ಇತರ ಪಕ್ಷಗಳಿಂದ ಬರುವ ಮುಖಂಡರ ಅಭಿಪ್ರಾಯ ಪಡೆದು ಕೆಪಿಸಿಸಿಗೆ ವರದಿ ಮಾಡುವುದಕ್ಕಾಗಿ ಅಲ್ಲಂ ವೀರಭದ್ರಪ್ಪ ಅಧ್ಯಕ್ಷತೆಯ ಸಮಿತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು