ಡಾ.ಶಿವರಾಮ ಕಾರಂತ ಬಡಾವಣೆಗೆ ಬಿಡಿಎ ಭೂಸ್ವಾಧೀನ ವಿರೋಧಿಸಿ ಬೈಕ್ ರ‍್ಯಾಲಿ

ಯಲಹಂಕ: ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ 17 ಹಳ್ಳಿಗಳ ರೈತ ಮಹಿಳೆಯರಿಂದ ಫೆ.6ರಂದು ಬೃಹತ್ ಪೊರಕೆ ಚಳವಳಿ ನಡೆಸಲಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಗುರುವಾರ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ರೈತರು, ರ‍್ಯಾಲಿಗೆ ಚಾಲನೆ ನೀಡಿದರು. ರಾಮಗೊಂಡನಹಳ್ಳಿಯಿಂದ ಆರಂಭವಾದ ಬೈಕ್ ರ‍್ಯಾಲಿ ಆವಲಹಳ್ಳಿ, ನಾಗೇನಹಳ್ಳಿ, ಕೆಂಪನಹಳ್ಳಿ, ವೀರಸಾಗರ, ಬೆಟ್ಟಹಳ್ಳಿ, ಶಾಮರಾಜಪುರ, ಬ್ಯಾಲಕೆರೆ, ಮುದ್ದಿನಪಾಳ್ಯ, ಕಾಳತಮ್ಮನ ಹಳ್ಳಿ, ಕೆಂಪಾಪುರ, ಗಾಣಿಗರಹಳ್ಳಿ, ಸೋಮಶೆಟ್ಟಿಹಳ್ಳಿ, ಗುಣಿ ಅಗ್ರಹಾರ, ಮೇಟಿ ಅಗ್ರಹಾರ ಲಕ್ಷ್ಮೀಪುರ ಗ್ರಾಮಗಳಲ್ಲಿ ಸಂಚರಿಸಿ, ವಡೇರಹಳ್ಳಿಯಲ್ಲಿ ಸಂಜೆ 4 ಗಂಟೆಗೆ ಕೊನೆಗೊಂಡಿತು.
ರೈತ ಮುಖಂಡರಾದ ಎಂ.ರಮೇಶ್, ರೈತ ಮುಖಂಡ ಮುನಿರಾಜು, ಕಾಂಗ್ರೆಸ್ ಮುಖಂಡ ಕೇಶವ ರಾಜಣ್ಣ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕ ವಿ.ನಾಗರಾಜ್, ಪ್ರಜಾ ವಿಮೋಚನಾ ಚಳವಳಿ(ಸ್ವಾಭಿಮಾನ) ರಾಜ್ಯ ಘಟಕದ ಅಧ್ಯಕ್ಷ ಮುನಿಆಂಜಿನಪ್ಪ, ರೈತ ಮುಖಂಡರಾದ ಪಂಚಾಕ್ಷರಿ, ವಸಂತ್, ಬ್ಯಾಲಕೆರೆ ಆನಂದ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.