ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆದರ್ ಬ್ಯಾಗ್‍ನಲ್ಲಿ ಡ್ರಗ್ಸ್: ಕಸ್ಟಮ್ಸ್ ಅಧಿಕಾರಿಗಳಿಂದ ವಶ

Last Updated 30 ಸೆಪ್ಟೆಂಬರ್ 2020, 19:21 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಸೆಂಟರ್‌ಗೆ ಮಂಗಳವಾರ ತಡರಾತ್ರಿ ಬಂದ ಲೆದರ್ ಬ್ಯಾಗ್‍ವೊಂದರಲ್ಲಿ ₹ 20 ಲಕ್ಷ ಮೌಲ್ಯದ 400 ಗ್ರಾಂನಷ್ಟು ಮೆಥಾಕ್ವಾಲೋನ್ ಮಾತ್ರೆಗಳು ಪತ್ತೆಯಾಗಿವೆ.

ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ವೇಳೆ ಈ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮಾತ್ರೆಗಳನ್ನು ಬ್ಯಾಗಿನ ಒಳಗೆ ಅಡಗಿಸಿ ಇಡಲಾಗಿತ್ತು.

ಇದೇ ಕೇಂದ್ರದಲ್ಲಿ ಇತ್ತೀಚೆಗಷ್ಟೇ ಎಕ್ಸ್‌ಟೆಸಿ ಮಾತ್ರೆಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ನೈಜೀರಿಯಾದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತನ ಹೆಸರಿಗೆ ಈ ಮಾದಕ ಮಾತ್ರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT