ಬೆಂಗಳೂರು: ಚಿಕ್ಕ ಗಾತ್ರದ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಮಾದಕ ವಸ್ತುಗಳನ್ನು (ಡ್ರಗ್ಸ) ತುಂಬಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

‘ಸಹೀಮುದ್ದೀನ್ ಮಜುಮ್ದಾರ್ ಅಲಿಯಾಸ್ ಲಂಬು, ಅಬ್ದುಲ್ ಹಲೀಂ, ತಂಗ್ ಮಿನ್ ಲಾಲ್ ಅಲಿಯಾಸ್ ಜೇಮ್ಸ್ ಹಾಗೂ ಮಹಮ್ಮದ್ ಫಾರೂಕ್ ಖಾನ್ ಬಂಧಿತರು. ಅಸ್ಸಾಂ ಹಾಗೂ ಮಣಿಪುರದವರಾದ ಆರೋಪಿಗಳಿಂದ ₹2.20 ಲಕ್ಷ ಮೌಲ್ಯದ22 ಗ್ರಾಂ ಹೆರಾಯಿನ್ ಹಾಗೂ ಟ್ಯೂಬ್ ಮಾದರಿಯ ಚಿಕ್ಕ ಗಾತ್ರದ ಪ್ಲಾಸ್ಟಿಕ್ ಡಬ್ಬಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿರುವ ಮಣಿಪುರದ ಅಲಿ ಎಂಬಾತನಿಂದ ಡ್ರಗ್ಸ್ ಖರೀದಿಸುತ್ತಿದ್ದ ಆರೋಪಿಗಳು, ಅದನ್ನೇ ಚಿಕ್ಕ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ತುಂಬಿ ಮಾರುತ್ತಿದ್ದರು. ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳೇ ಹೆಚ್ಚಾಗಿ ಆರೋಪಿಗಳ ಬಳಿ ಡ್ರಗ್ಸ್ ಖರೀದಿ ಮಾಡುತ್ತಿದ್ದರು’ ಎಂದರು.

‘ಶಿವಾಜಿನಗರ ಠಾಣೆ ವ್ಯಾಪ್ತಿಯ ಚಾರ್ಮೀನಾರ್ ರಸ್ತೆಯ ಮನೆಯಲ್ಲಿ ಬಾಡಿಗೆಗಿದ್ದ ಆರೋಪಿಗಳು, ಅಲ್ಲಿಯೇ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡಿದ್ದರು. ಮಾಹಿತಿದಾರರೊಬ್ಬರು ನೀಡಿದ್ದ ಸುಳಿವಿನಂತೆ ಮನೆ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಸೆರೆಹಿಡಿಯಲಾಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.