‘ಪಾರ್ಕಿಂಗ್‌ಗೆ ಹೆಚ್ಚು ತೆರಿಗೆ ವಸೂಲಿ’
‘ಫ್ಲ್ಯಾಟ್ ಆಸ್ತಿ ತೆರಿಗೆಯಲ್ಲಿ ಪಾರ್ಕಿಂಗ್, ಕಾಮನ್ ಏರಿಯಾದ ಶುಲ್ಕವೂ ಸೇರಿರುವುದರಿಂದ ಪ್ರತ್ಯೇಕವಾಗಿ ತೆರಿಗೆ ಪಾವತಿಸುವಂತಿಲ್ಲ ಎಂದು ರೆರಾ ಹೇಳಿದೆ. ಅದರಂತೆಯೇ ಇಲ್ಲಿಯವರೆಗೆ ಆಸ್ತಿ ತೆರಿಗೆ ಪಾವತಿಸಲಾಗುತ್ತಿತ್ತು.
ಆದರೆ, ಇದೀಗ ಬಿಬಿಎಂಪಿಯವರು ಇ–ಖಾತಾ ಪಡೆದುಕೊಂಡ ಮೇಲೆ ಪಾರ್ಕಿಂಗ್‌ಗೆ ಪ್ರತ್ಯೇಕ ತೆರಿಗೆ ನೀಡಬೇಕು. ಅದನ್ನು ಕೂಡಲೇ ಪಾವತಿಸಬೇಕು ಎಂದು ನೋಟಿಸ್ ನೀಡಿ ಜನರನ್ನು ಹಿಂಸಿಸುತ್ತಿದ್ದಾರೆ’ ಎಂದು ಮಾಲೀಕರೊಬ್ಬರು ಅಳಲು ತೋಡಿಕೊಂಡರು.