ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ಬ್ರಿಟಿಷ್ ಗಾಯಕ ಎಡ್ ಶೀರನ್ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ತೆಲುಗು ಹಾಡು ಹಾಡಿದ್ದಾರೆ.

ಗಾಯಕಿ ಶಿಲ್ಪಾ ರಾವ್ ಅವರೊಂದಿಗೆ ಜೊತೆಯಾಗಿ ದೇವರ ಚಿತ್ರದ ‘ಚುಟ್ಟೆಮಲ್ಲೆ’ ತೆಲುಗು ಹಾಡನ್ನು ಶೀರನ್ ಹಾಡಿದ್ದಾರೆ.

ತೆಲುಗು ಹಾಡಿನ ಮೂಲಕವೇ ಕಾರ್ಯಕ್ರಮವನ್ನು ಆರಂಭಿಸಿದ್ದು ನೆರೆದವರನ್ನು ಇನ್ನಷ್ಟು ರಂಜಿಸಿತು. ಶೀರನ್ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

‘ಸಂಗೀತಕ್ಕೆ ಗಡಿಯಿಲ್ಲ ಎನ್ನುವುದನ್ನು ಶೀರನ್ ಸಾಬೀತುಪಡಿಸಿದ್ದಾರೆ’ ಎಂದು ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ಜ.30ರಿಂದ ಭಾರತದ ಪ್ರವಾಸದಲ್ಲಿರುವ ಶೀರನ್ ಪುಣೆಯಲ್ಲಿ ಮೊದಲ ಕಾರ್ಯಕ್ರಮ ನೀಡಿದ್ದರು. ಚೆನ್ನೈನಲ್ಲಿ ಎ.ಆರ್.ರೆಹಮಾನ್ ಅವರೊಂದಿಗೆ ಪ್ರದರ್ಶನ ನೀಡಿದ್ದರು.

ಫೆ.15ರಂದು ಶೀರನ್ ಭಾರತ ಪ್ರವಾಸವನ್ನು ಕೊನೆಗೊಳಿಸಲಿದ್ದು, ದೆಹಲಿ–ಎನ್ಸಿಆರ್ನಲ್ಲಿ ಕೊನೆಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಭಾನುವಾರ ಬೆಳಿಗ್ಗೆ ನಗರದ ಚರ್ಚ್ಸ್ಟ್ರೀಟ್ನಲ್ಲಿ ಶೀರನ್ ಹಾಡುತ್ತಿರುವ ವೇಳೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ಅವರನ್ನು ತಡೆದ ಘಟನೆ ನಡೆದಿತ್ತು.
.ಬೆಂಗಳೂರು: ಇಂಗ್ಲೆಂಡ್ನ ಗಾಯಕ ಎಡ್ ಶೀರನ್ ‘ಸ್ಟ್ರೀಟ್’ ಸಂಗೀತಕ್ಕೆ ಪೊಲೀಸರ ತಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.