ಬೆಂಗಳೂರು: ಬೈಕ್ ಷೋರೂಂ ಎದುರು ಟೆಂಟ್ ತೆಗೆಯುವ ಸಂದರ್ಭದಲ್ಲಿ ಕಬ್ಬಿಣದ ಕಂಬಗಳಿಗೆ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಅಸನ್ ಅಲಿ (40) ಹಾಗೂ ಅಬ್ದುಲ್ ಖಯುಂ (42) ಮೃತ ಕಾರ್ಮಿಕರು.

ಮೊಮ್ರೋಜ್ ಅಲಿ ಹಾಗೂ ಮೊಹಿದುಲ್ ಇಸ್ಲಾಂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಎಲೆಕ್ಟ್ರಾನಿಕ್ ಸಿಟಿಯ ಬಿಎಂಎಸ್ ಟೆಂಟ್ ಹೌಸ್ನಲ್ಲಿ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸಿಂಗಸಂದ್ರದ ಸರ್ವೀಸ್ ರಸ್ತೆಯಲ್ಲಿರುವ ದಕ್ಷಿಣ ಹೋಂಡಾ ಷೋರೂಂ ಎದುರು ಹಾಕಲಾಗಿದ್ದ ಟೆಂಟ್ ಅನ್ನು ತೆಗೆಯುವ ಕೆಲಸಕ್ಕೆಂದು ಕಾರ್ಮಿಕರು ಆಗಸ್ಟ್ 18ರಂದು ತೆರಳಿದ್ದರು. ಟೆಂಟ್ ತೆಗೆಯುವ ಸಂದರ್ಭದಲ್ಲಿ ಕಬ್ಬಿಣದ ಕಂಬಕ್ಕೆ ತಂತಿ ತಗುಲಿ ನಾಲ್ವರು ಕಾರ್ಮಿಕರು ಅಸ್ವಸ್ಥಗೊಂಡಿದ್ದರು. ನಾಲ್ವರನ್ನು ಅಭಿರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಇಬ್ಬರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ಗಾಯಾಳು ಮೊಮ್ ರೋಜ್ ಅಲಿ ಅವರ ಹೇಳಿಕೆ ಆಧರಿಸಿ, ಷೋರೂಂ ಹಾಗೂ ಟೆಂಟ್ ಹೌಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಟೆಂಟ್ ಹೌಸ್ ಹಾಗೂ ಷೋರೂಂ ಮಾಲೀಕರು ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಲಕರಣೆ ನೀಡಿರಲಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.