ಮಂಗಳವಾರ, ಫೆಬ್ರವರಿ 18, 2020
31 °C
ಗ್ರಾಮ ದೇವರ ತೇರು ಎಳೆದು ಸಂಭ್ರಮಿಸಿದ ವಿದ್ಯಾರ್ಥಿನಿಯರು

ಮೆರುಗು ನೀಡಿದ ಜಾನಪದ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಂಚೆ ಕಟ್ಟಿ ಕುಸ್ತಿಯ ಅಖಾಡಕ್ಕಿಳಿದ ಯುವತಿಯರು ಕಸರತ್ತು ಪ್ರದರ್ಶಿಸಿದರು. ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿ, ಗ್ರಾಮ ದೇವತೆಯ ತೇರನ್ನು ಎಳೆದರು. ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. 

ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜು ಆಯೋಜಿಸಿದ್ದ ‘ಜಾನಪದ ಜಾತ್ರೆ’ಯಲ್ಲಿ ವಿದ್ಯಾರ್ಥಿನಿಯರು ಗ್ರಾಮೀಣ ಪ್ರಪಂಚ ಅನಾವರಣ ಮಾಡಿದರು. ಜಾನಪದ ನೃತ್ಯ ವೈಭವಕ್ಕೆ ಮನಸೋತ ವಿದ್ಯಾರ್ಥಿನಿಯರು ಗೋ ಶಾಲೆ, ಸಂತೆ, ಪಂಚಾಯಿತಿ ಕಟ್ಟೆ, ಅರವಟ್ಟಿಕೆ, ಒಟ್ಟು ಕುಟುಂಬದ ಮನೆಯನ್ನು ಬೆರಗು ಕಣ್ಣಿನಿಂದ ವೀಕ್ಷಿಸಿದರು.  

ದೇಸಿ ಆಹಾರ ಮಳಿಗೆಗಳಲ್ಲಿನ ಬಗೆ ಬಗೆಯ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿದ್ದವು. ಸೋಲಿಗರ ಕುಣಿತ, ಸುಗ್ಗಿ ಕುಣಿತ, ಜೋಗತಿ ಕುಣಿತ, ಲಂಬಾಣಿ ನೃತ್ಯ, ಕರಗ, ಪೂಜಾ ಕುಣಿತ, ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಮನಸೂರೆಗೊಂಡವು. 

ಜನರನ್ನು ಒಗ್ಗೂಡಿಸುವ ಕಲೆ: ‘ರಾಜಕಾರಣ ಜನರನ್ನು ಒಡೆದರೆ, ಜಾನಪದ ಕಲೆ ಜನರನ್ನು ಒಗ್ಗೂಡಿಸುತ್ತದೆ. ಬಹುತ್ವದ ಪ್ರಜ್ಞೆಯನ್ನು ಬೆಳೆಸುವ ಜಾನಪದ ಸಂಸ್ಕೃತಿಯನ್ನು ಉಳಿಸಬೇಕು. ಬರಹರಹಿತ ಸಂಸ್ಕೃತಿಯಾಗಿರುವ ಜಾನಪದದಂತಹ ಅಪೂರ್ವ ಶಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. 

ಗಾಯಕರಾದ ಗುರುರಾಜ ಹೊಸಕೋಟೆ, ಸವಿತಾ ಗಣೇಶ್, ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು