ವಂಚನೆ: ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಪತ್ನಿ, ಮಗನ ವಿರುದ್ಧ ಎಫ್‌ಐಆರ್

ಬೆಂಗಳೂರು: ನಿವೇಶನಗಳ ಅಭಿವೃದ್ಧಿಗಾಗಿ ಸ್ಥಾಪಿಸಿದ್ದ ಸನ್‌ಸೈನ್ ಗ್ರೂಪ್ ಕಂಪನಿಯ ಪಾಲುದಾರರಿಗೆ ವಂಚಿಸಿದ್ದ ಆರೋಪದಡಿ ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಅವರ ಪತ್ನಿ ಧನಲಕ್ಷ್ಮಿ ಹಾಗೂ ಮಗ ಜ್ಯೋತಿರ್ ತೇಜೋಮಯ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಂಪನಿ ಪಾಲುದಾರರಾದ ಎಂ. ಪ್ರಭಾವತಿ ದೂರು ನೀಡಿದ್ದಾರೆ. ಬಿ. ರಾಜನ್, ಎಂ.ಎಸ್. ಧನಲಕ್ಷ್ಮಿ ಹಾಗೂ ಜ್ಯೋತಿರ್ ತೇಜೋಮಯ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕಂಪನಿ ವತಿಯಿಂದ ಬೆಂಗಳೂರು ಪೂರ್ವ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ 4 ಎಕರೆ ಜಮೀನಿನಲ್ಲಿ 87 ನಿವೇಶನ ಅಭಿವೃದ್ಧಿಪಡಿಸಲಾಗಿತ್ತು. ಸನ್ ಸಿಟಿ ಲೇಔಟ್ ಎಂಬ ಹೆಸರಿಡಲಾಗಿತ್ತು. ನಿವೇಶನ ಮಾರಾಟಕ್ಕೆ ಪಾಲುದಾರರೆಲ್ಲರ ಸಹಿ ಅಗತ್ಯವಿತ್ತು. ಪ್ರಭಾವತಿ ಅವರ ಹೆಸರಿನಲ್ಲಿ ನಕಲಿ ಸಹಿ ಹಾಗೂ ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪಿಗಳು, ಅಕ್ರಮವಾಗಿ ನಿವೇಶನ ಮಾರಿ ವಂಚಿಸಿದ್ದಾರೆಂಬ ಆರೋಪವಿದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.