ಬೆಂಗಳೂರು: ‘ದೇಹ ಹಾಗೂ ಚರ್ಮಕ್ಕೆ ಬರಬಹುದಾದ ರೋಗಗಳನ್ನು ತಡೆಯಲು ಸಹಾಯಕವಾಗಿರುವ ಗಾಯತ್ರಿ ಮಂತ್ರವು ನಮ್ಮಲ್ಲಿನರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ’ ಎಂದು ವಿದ್ವಾಂಸ ಅರಳು ಮಲ್ಲಿಗೆಪಾರ್ಥಸಾರಥಿ ತಿಳಿಸಿದರು.

ಅಖಿಲ ಹವ್ಯಕ ಮಹಾಸಭಾ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಗಾಯತ್ರಿ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಯತ್ರಿ ಮಂತ್ರವು ಮನುಷ್ಯನ ದೇಹದ ಮೇಲೆ ಬೀರುವ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಆಲ್ ಇಂಡಿಯಾ
ಮೆಡಿಕಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್ ನಡೆಸಿದ ವರದಿಯೇ ಇದಕ್ಕೆ ಉದಾಹರಣೆ. ಈ ಮಂತ್ರವನ್ನುನಿರಂತರವಾಗಿ ಪಠಣೆ ಮಾಡುವುದರಿಂದ ಬುದ್ಧಿಶಕ್ತಿಯೂ ಚುರುಕಾಗುತ್ತದೆ. ಮಕ್ಕಳು ನಿತ್ಯಕನಿಷ್ಠ 10 ನಿಮಿಷ ಮಂತ್ರ ಪಠಿಸಬೇಕು’ ಎಂದು ಕಿವಿಮಾತು ಹೇಳಿದರು.

ಮೆರವಣಿಗೆ:ಗಾಯತ್ರಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಗಾಯತ್ರಿ ಹವನ ಹಾಗೂ ಗಾಯತ್ರಿ ದೇವಿಯ ಮೆರವಣಿಗೆ ನಡೆಯಿತು.

ಈ ವೇಳೆ ಶಶಿಧರ ಕೋಟೆ ಅವರು ಗಾಯತ್ರಿ ನಮನ ಸಲ್ಲಿಸಿದರು. ಬಳಿಕ ಶತಾವಧಾನಿ ಆರ್.ಗಣೇಶ್ ಗಾಯತ್ರಿ ತತ್ವಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಹಾಸಭೆ ಅಧ್ಯಕ್ಷ ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ, ಸಂಚಾಲಕ ಕೃಷ್ಣಮೂರ್ತಿ ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.