ಬೆಂಗಳೂರು: ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿರುವ ಪಂಚಕರ್ಮ ಚಿಕಿತ್ಸಾ ಘಟಕದ ಕೊಠಡಿಗಳಿಗೆ ಮಾತ್ರ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಮೇಲ್ದರ್ಜೆಗೇರಿಸಲಾದ ಈ ಘಟಕಕ್ಕೆ ಅಗತ್ಯ ಚಿಕಿತ್ಸಾ ಸಾಧನಗಳನ್ನು ಒದಗಿಸಿಲ್ಲ. ಇದರಿಂದಾಗಿ ಗುಣಮಟ್ಟದ ಪಂಚಕರ್ಮ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ.

ಇಲ್ಲಿನ ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿನ ಪಂಚಕರ್ಮ ಚಿಕಿತ್ಸಾ ಘಟಕವನ್ನು ಇತ್ತೀಚೆಗೆ ನವೀಕರಿಸಲಾಗಿದೆ. 2009ರಲ್ಲಿ ಉದ್ಘಾಟನೆಗೊಂಡಿದ್ದ, ಆಸ್ಪತ್ರೆಯ ಹೊರ ರೋಗಿ ವಿಭಾಗ ಹಾಗೂ ‘ಪುನರ್ನವ’ ಪಂಚಕರ್ಮ ಒಳ ರೋಗಿ ವಿಭಾಗದ ಕಟ್ಟಡದ ಮೂರು ಮಹಡಿಗಳನ್ನು ಪಂಚಕರ್ಮ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇಲ್ಲಿ 18 ಕೊಠಡಿಗಳಿದ್ದು, ಎಲ್ಲ ಕೊಠಡಿಗಳನ್ನು ಒಟ್ಟು ₹ 2.96 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಆದರೆ, ಚಿಕಿತ್ಸೆಗೆ ಅಗತ್ಯವಿರುವ ಶಿರೋಧರ, ಸ್ಟೀಮ್ ಬಾಕ್ಸ್ನಂತಹ ಸಾಧನಗಳನ್ನು ಅಳವಡಿಸಿಲ್ಲ.

ರಾಷ್ಟ್ರೀಯ ಆಯುಷ್ ಮಿಷನ್ ಅಡಿ ಈ ನವೀಕರಣಕ್ಕೆ ಅನುದಾನ ಭರಿಸಲಾಗಿದೆ. 18 ಕೊಠಡಿಗಳಿಗೂ ಹೈಟೆಕ್ ಹೆಸರಿನಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಲಾಗಿದ್ದು, ಗೋಡೆಗಳಿಗೆ ಮರದ ಹೊದಿಕೆಯ ವಿನ್ಯಾಸ ಮಾಡಲಾಗಿದೆ. ಚಾವಣಿಗೂ ಅಲಂಕಾರ ಮಾಡಿದ್ದು, ಹೊರಗಡೆ ಸಹಾಯಕರಿಗೆ ವಿಶ್ರಾಂತಿಗೆ ಸೋಫಾ ಇರಿಸಲಾಗಿದೆ. ಸ್ನಾನ ಕೊಠಡಿ, ಶೌಚಾಲಯವನ್ನೂ ಮರುವಿನ್ಯಾಸ ಮಾಡಲಾಗಿದೆ. ಮಸಾಜ್ ಟೇಬಲ್, ಹಾಸಿಗೆಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಕಟ್ಟಡದ ಕೊಠಡಿಗಳ ಒಳಾಂಗಣ ವಿನ್ಯಾಸಕ್ಕೆ ಮಾತ್ರ ಹೈಟೆಕ್ ಸ್ಪರ್ಶ ನೀಡಿ, ಚಿಕಿತ್ಸೆಗೆ ಸೌಲಭ್ಯ ಒದಗಿಸದಿರುವುದು ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ.

‘ಪಾರ್ಶ್ವವಾಯು ಸೇರಿ ವಿವಿಧ ಸಮಸ್ಯೆ ಎದುರಿಸುತ್ತಿರುವವರು ಪಂಚಕರ್ಮ ಚಿಕಿತ್ಸೆಗೆ ಬರುತ್ತಾರೆ. ಈ ಚಿಕಿತ್ಸಾ ವಿಧಾನವು ದೇಹದಲ್ಲಿನ ಎಲ್ಲ ತ್ಯಾಜ್ಯಗಳನ್ನು ಹೊರಹಾಕಲು ಸಹಕಾರಿಯಾಗಿದೆ. ಈ ಹೈಟೆಕ್ ಘಟಕಕ್ಕೆ ಮಸಾಜ್ ಸೇರಿ ವಿವಿಧ ಚಿಕಿತ್ಸೆಗೆ ಅಗತ್ಯವಿರುವ ಸಾಧನಗಳನ್ನು ಒದಗಿಸಿಲ್ಲ’ ಎಂದು ಘಟಕದ ಸಿಬ್ಬಂದಿ ತಿಳಿಸಿದರು.

ದರ ಹೆಚ್ಚಳಕ್ಕೆ ಅಸಮಾಧಾನ: ನವೀಕೃತ ಕೊಠಡಿಗಳಿಗೆ ದಿನವೊಂದಕ್ಕೆ ₹ 375 ನಿಗದಿಪಡಿಸಲಾಗಿದೆ. ಸಿಬ್ಬಂದಿ ವೆಚ್ಚ ಪ್ರತ್ಯೇಕವಾಗಿ ಇರಲಿದೆ. ಈ ಮೊದಲು ₹ 100 ನಿಗದಿಪಡಿಸಲಾಗಿತ್ತು. ನವೀಕರಣದ ಬಳಿಕ ದರ ಪರಿಷ್ಕರಣೆ ಮಾಡಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಸಾಧನಗಳನ್ನು ಒದಗಿಸದೆ, ದರ ಹೆಚ್ಚಳ ಮಾಡಿರುವುದು ರೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಯ ಈ ಘಟಕಕ್ಕೆ ಹೊರ ರಾಜ್ಯಗಳಿಂದಲೂ ಪಂಚಕರ್ಮ ಚಿಕಿತ್ಸೆಗೆ ರೋಗಿಗಳು ಬರುತ್ತಾರೆ.

‘ಖಾಸಗಿ ಕೇಂದ್ರಗಳಲ್ಲಿ ಪಂಚಕರ್ಮ ಚಿಕಿತ್ಸೆ ದುಬಾರಿ ಎಂಬ ಕಾರಣ ಸರ್ಕಾರಿ ಆಸ್ಪತ್ರೆಯ ಈ ಘಟಕಕ್ಕೆ ಬರುತ್ತಿದ್ದೇವೆ. ಹೈಟೆಕ್ ಘಟಕಗಳಲ್ಲಿ ಇರುವ ಚಿಕಿತ್ಸಾ ಸೌಲಭ್ಯಗಳು ಇಲ್ಲಿ ಸಿಗುತ್ತಿಲ್ಲ. ಉತ್ತಮವಾಗಿದ್ದ ಕೊಠಡಿಗಳನ್ನು ಅನಗತ್ಯ ನವೀಕರಣ ಮಾಡಲಾಗಿದೆ. ಕಟ್ಟಡದ ನವೀಕರಣದ ಬದಲು, ವೈದ್ಯಕೀಯ ಸಾಧನಗಳ ಅಳವಡಿಕೆಗೆ ಆದ್ಯತೆ ನೀಡಬೇಕಿತ್ತು’ ಎಂದು ರೋಗಿಗಳು ತಿಳಿಸಿದರು.

ಕೊಠಡಿಗಳ ನವೀಕರಣದ ಕಾರಣ ಚಿಕಿತ್ಸೆಯ ದರ ಪರಿಷ್ಕರಿಸಲಾಗಿದೆ. ಇರುವ ವ್ಯವಸ್ಥೆಯಡಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ.
– ಡಾ. ವೆಂಕಟರಾಮಯ್ಯ, ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ (ಆರ್ಎಂಒ)

ಒಂದೇ ‘ಸ್ಟೀಮ್ ಬಾಕ್ಸ್’ ಪಂಚಕರ್ಮ ಚಿಕಿತ್ಸೆ

ಪಡೆಯುವವರಿಗೆ ಹಬೆ ಪಡೆಯಲು ‘ಸ್ಟೀಮ್ ಬಾಕ್ಸ್’ ಅತ್ಯಗತ್ಯ. ಆದರೆ ಈ ಘಟಕದ 18 ಕೊಠಡಿಗಳಲ್ಲಿ ಒಂದು ಕೊಠಡಿಯಲ್ಲಿ ಮಾತ್ರ ಈ ಬಾಕ್ಸ್ ಇದೆ. ಅದು ಕೂಡ ಈ ಹಿಂದೆ ಖರೀದಿಸಿದ್ದು ಹಾಗೇ ಉಳಿಸಿಕೊಳ್ಳಲಾಗಿದೆ. ಈ ಬಾಕ್ಸ್ಗೆ ಹಬೆ ಪಡೆಯಲು ಸೂಕ್ತ ಸಂಪರ್ಕ ಕಲ್ಪಿಸದ ಪರಿಣಾಮ ನಿರುಪಯುಕ್ತವಾಗಿದೆ. ಪಂಚಕರ್ಮ ಘಟಕದಲ್ಲಿ ಅತ್ಯಾಧುನಿಕ ಸಾಧನಗಳು ಇರದಿರುವುದು ವಿದ್ಯಾರ್ಥಿಗಳ ಕಲಿಕೆಗೂ ತೊಡಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.