ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಜ್ಞರ ಸಮಿತಿಯ ಸಲಹೆಯನ್ನು ಮೀರಿ ರಸ್ತೆ ಕಸ ಗುಡಿಸಲು ದುಬಾರಿ ವೆಚ್ಚದಲ್ಲಿ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಮುಂದಾಗಿದೆ. ಆದರೆ, ಅದೇ ಕೆಲಸಕ್ಕೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್ಡಬ್ಲ್ಯಎಂಎಲ್) ಒಂದು ಯಂತ್ರಕ್ಕೆ ₹82 ಲಕ್ಷ ವೆಚ್ಚ ಮಾಡುತ್ತಿದೆ.

ತಜ್ಞರ ತಾಂತ್ರಿಕ ವರದಿಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ರೂಪಿಸಿದ್ದ ಜಿಬಿಎ ಎಂಜಿನಿಯರ್ಗಳು ವರದಿಯನ್ನೇ ಆಧರಿಸಿ, ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಿದೆ.

1,682.10 ಕಿ.ಮೀ. ಉದ್ದದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಕಸ ಗುಡಿಸಲು ಬಾಡಿಗೆ ಆಧಾರದಲ್ಲಿ ವಾಹನಗಳನ್ನು ಏಳು ವರ್ಷಕ್ಕೆ ಪಡೆದುಕೊಳ್ಳಲು ಬಿಬಿಎಂಪಿಯಾಗಿದ್ದಾಗ ಪ್ರಸ್ತಾವ ಸಲ್ಲಿಸಲಾಗಿತ್ತು. 2025ರ ಏಪ್ರಿಲ್ 17ರಂದು, ಅಂದಿನ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಅವರು ಪ್ರಸ್ತಾವ ಸಲ್ಲಿಸಿದ್ದರು. ಜಿಬಿಎ ಪ್ರಕ್ರಿಯೆಯಲ್ಲಿ ತಣ್ಣಗಾಗಿದ್ದ ಈ ಪ್ರಸ್ತಾವವನ್ನು ಮುಂದುವರಿಸಲು ಆಗಸ್ಟ್ನಿಂದ ಹೆಚ್ಚಿನ ಚಾಲನೆ ನೀಡಲಾಯಿತು.

ಸರ್ಕಾರ ರಚಿಸಿದ್ದ ತಜ್ಞರ ಸಮಿತಿ, ಬಾಡಿಗೆ ಆಧಾರದಲ್ಲಿ ವಾಹನಗಳನ್ನು ಪಡೆಯುವುದು ಸರಿಯಲ್ಲ ಎಂದೂ ಸೂಚಿಸಿತ್ತು. ಈ ವರದಿಯನ್ನು ಪರಿಗಣಿಸಲು, ಇದೀಗ ಜಿಬಿಎ ಮುಖ್ಯ ಎಂಜಿನಿಯರ್ ಆಗಿರುವ ಬಿ.ಎಸ್. ಪ್ರಹ್ಲಾದ್ ನೇತೃತ್ವದಲ್ಲಿ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ನ ತಂಡದಿಂದ ತಾಂತ್ರಿಕ ವರದಿಯನ್ನು ಪಡೆಯಲಾಗಿದೆ. ಸಹಜವಾಗಿ, ಪ್ರಹ್ಲಾದ್ ಅವರು ಬಾಡಿಗೆಗೆ ವಾಹನಗಳನ್ನು ಪಡೆಯುವುದೇ ಸೂಕ್ತ ಎಂದು ಸೆಪ್ಟೆಂರ್ 22ರಂದು ವರದಿ ನೀಡಿದ್ದಾರೆ.

ಒಂದು ಕಸ ಗುಡಿಸುವ ವಾಹನದ ವೆಚ್ಚ ₹2.24 ಕೋಟಿ, ಹುಕ್ ಲೋಡರ್ಗೆ ₹44 ಲಕ್ಷ, ಎರಡು ಕಂಟೈನರ್ಗೆ ₹15 ಲಕ್ಷ ಸೇರಿ ಪ್ರತಿ ವಾಹನದ ವೆಚ್ಚ ₹3 ಕೋಟಿ. ಪಾಲಿಕೆಯೇ ಇವುಗಳನ್ನು ಖರೀದಿಸಿದ ಮೇಲೆ, ಇಂಧನ, ಸಿಬ್ಬಂದಿ ಸೇರಿದಂತೆ ನಿರ್ವಹಣೆ, ಆರ್ಟಿಒ, ಸದೃಢತೆ ಪ್ರಮಾಣಪತ್ರ, ಬ್ಯಾಟರಿ, ಟೈರ್ ಎಲ್ಲದರ ವೆಚ್ಚವನ್ನೂ ಕಾಲಕಾಲಕ್ಕೆ ಭರಿಸಬೇಕಾಗುತ್ತದೆ. ಬಿಬಿಎಂಪಿಯೇ ಎಲ್ಲವನ್ನೂ ಭರಿಸಿದರೆ, ಅದು ಬಾಡಿಗೆ ಆಧಾರದಲ್ಲಿ ಪಡೆದಷ್ಟೇ ಆಗುತ್ತದೆ. ಹೀಗಾಗಿ ಪ್ರತಿ ಕಿ.ಮೀಗೆ ₹924ರ ಬದಲು ₹894.53 ವೆಚ್ಚ ಭರಿಸಿ, ಬಾಡಿಗೆ ಆಧಾರದಲ್ಲೇ ಪಡೆದುಕೊಳ್ಳಬಹುದು ಎಂದು ಪ್ರಹ್ಲಾದ್ ಸಮಿತಿ ತಿಳಿಸಿದೆ.

ಸರ್ಕಾರ ರಚಿಸಿದ್ದ ತಜ್ಞರ ತಾಂತ್ರಿಕ ಸಮಿತಿಯ ವರದಿಗೆ ವಿರುದ್ಧವಾಗಿ, ಪ್ರಹ್ಲಾದ್ ಅವರು ನೀಡಿದ ವರದಿಗೆ ಜಿಬಿಎ ಹಾಗೂ ನಗರಾಭಿವೃದ್ಧಿ ಇಲಾಖೆ ಮಣೆ ಹಾಕಿದೆ. ಏಳು ವರ್ಷಗಳ ಅವಧಿಗೆ ಬಾಡಿಗೆ ಆಧಾರದಲ್ಲೇ 46 ವಾಹನಗಳಿಗೆ ₹613 ಕೋಟಿ ವೆಚ್ಚ ಮಾಡಲು ಸಚಿವ ಸಂಪುಟವೂ ಸಮ್ಮತಿಸಿದೆ.

ತಾಂತ್ರಿಕ ವರದಿಯ ಪ್ರಮುಖಾಂಶ

ಬಿಬಿಎಂಪಿಯ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಸ್ವಚ್ಛತೆಗೆ ಕಸ ಗುಡಿಸುವ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ನಿಯೋಜಿಸಲು ಸಿದ್ಧಪಡಿಸಿರುವ ಟೆಂಡರ್ ಮಾದರಿ ಹಾಗೂ ಅಂದಾಜು ಪಟ್ಟಿ ಬಗ್ಗೆ ಪರಿಶೀಲಿಸಿ ತಾಂತ್ರಿಕ ವರದಿ ನೀಡುವಂತೆ ಮೂವರ ತಜ್ಞರ ಸಮಿತಿಯನ್ನು ರಾಜ್ಯ ಸರ್ಕಾರ 2025ರ ಮೇ 27ರಂದು ರಚಿಸಿತ್ತು. ಈ ಸಮಿತಿ ಆಗಸ್ಟ್ 8ರಂದು ವರದಿ ನೀಡಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಕೆಯುಡಬ್ಲ್ಯುಎಸ್ಡಿಬಿ) ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ ಅವರು ಅಧ್ಯಕ್ಷರಾಗಿದ್ದ ಈ ತಜ್ಞರ ಸಮಿತಿಯಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ (ಕೆಯುಐಡಿಎಫ್ಸಿ) ಮುಖ್ಯ ಎಂಜಿನಿಯರ್ ಜೆ.ಆರ್. ನಂದೀಶ್ ಹಾಗೂ ಲೋಕೋಪಯೋಗಿ ಇಲಾಖೆಯ ಬೆಂಗಳೂರು ದಕ್ಷಿಣದ (ಸಿಆ್ಯಂಡ್ಬಿ) ಮುಖ್ಯ ಎಂಜಿನಿಯರ್ ಮಂಜಪ್ಪ ಅವರು ಸದಸ್ಯರಾಗಿದ್ದರು.

ರೈಟ್ಸ್ ಮತ್ತು ಬಿಸಿಜಿ ಸಂಸ್ಥೆಗಳು ಅನೌಪಚಾರಿಕವಾಗಿ ಲೆಕ್ಕ ಹಾಕಿರುವ ವಿವರಗಳು ಪ್ರಸ್ತಾವದಲ್ಲಿ ಲಭ್ಯವಿಲ್ಲ

ಬಿಬಿಎಂಪಿ ಸಿದ್ಧಪಡಿಸಿರುವ ಅಂದಾಜು ಪಟ್ಟಿಯಲ್ಲಿ ಡೀಸೆಲ್ ದರಗಳ ಅಂದಾಜನ್ನು ವಾಹನ ಚಲಿಸಬಹುದಾದ ಗರಿಷ್ಠ ಮಿತಿಗೆ ಪ್ರತಿದಿನದಂತೆ ಅಂದಾಜಿಸಲಾಗಿದೆ. ಇದು ನಿತ್ಯ ಬದಲಾವಣೆಯಾಗುತ್ತಿರುತ್ತದೆ

ರಸ್ತೆ ಗುಡಿಸುವ ಯಂತ್ರದ ಜೊತೆಗೆ ಒಂದು ಹುಕ್ ಲೋಡರ್ ಎರಡು ಘನಮೀಟರ್ ಸಾಮರ್ಥ್ಯದ ಕಸ ಸಂಗ್ರಹ ಕಂಟೈನರ್ ಹಾಗೂ ಒಬ್ಬ ಕೂಲಿ ಆಳನ್ನು ನೇಮಿಸಿಕೊಂಡು ಅಂದಾಜಿಸಲಾಗಿದೆ. ಇದನ್ನು ಇತರೆ ನಗರಗಳು ಅಳವಡಿಸಿಕೊಂಡಿಲ್ಲ. ಆದರೂ ಅವುಗಳೊಂದಿಗೆ ತಾಳೆ ಹಾಕಿರುವುದು ಸಮಂಜಸವಲ್ಲ

ಅಂತರರಾಷ್ಟ್ರೀಯ ಮಟ್ಟದ ದೊಡ್ಡ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಣಮಟ್ಟದ ಕಸ ಗುಡಿಸುವ ಯಂತ್ರ/ ವಾಹನಗಳನ್ನು ಪಾಲಿಕೆಯೇ ನೇರವಾಗಿ ಖರೀದಿಸುವುದು ಸೂಕ್ತ

ಪಾಲಿಕೆಯಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಸಿಕೊಂಡು ನಿರ್ವಹಿಸಿದರೆ ಗುತ್ತಿಗೆದಾರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ

ಪಾಲಿಕೆಯ ಮೂಲ ಬಂಡವಾಳದಿಂದ ವಾಹನಗಳನ್ನು ಖರೀದಿಸಿ ಕಾರ್ಯಾಚರಣೆ ನಿರ್ವಹಣೆ ಜವಾಬ್ದಾರಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ನೀಡುವುದನ್ನು ಎರಡನೇ ಆಯ್ಕೆಯಾಗಿ ಪರಿಗಣಿಸಬಹುದು

ವಾಹನಗಳ ಸಂಪೂರ್ಣ ಸೇವೆಯನ್ನು ಬಾಡಿಗೆ ಆಧಾರದ ಮೇಲೆ ಪಡೆಯುವುದು ಸೂಕ್ತ ಪ್ರಸ್ತಾವವಲ್ಲ. ಗುತ್ತಿಗೆದಾರರು ಒದಗಿಸುವ ಯಂತ್ರಗಳ ತಾಂತ್ರಿಕ ವಿಶಿಷ್ಟ ಅಂಶಗಳನ್ನು ಪರಿಶೀಲಿಸುವುದು ಕಷ್ಟಸಾಧ್ಯ. ಪ್ರತಿ ಯಂತ್ರದ ಮೇಲೆ ನಿಗಾವಹಿಸಿ ಕಾರ್ಯನಿರ್ವಹಿಸುವುದು ಕಾರ್ಯಸಾಧುವಲ್ಲ

24 ವಾಹನ ಖರೀದಿ

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಕಸ ಗುಡಿಸಲು 24 ‘ಸ್ವೀಪಿಂಗ್ ಮಷಿನ್’ಗಳನ್ನು ಖರೀದಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್ಡಬ್ಲ್ಯುಎಂಎಲ್) ಟೆಂಡರ್ ಆಹ್ವಾನಿಸಿದೆ. ಪ್ರತಿಯೊಂದು ವಾಹನಕ್ಕೆ ಅಂದಾಜು ₹82 ಲಕ್ಷ ವೆಚ್ಚವಾಗಲಿದೆ. ‘ಸ್ವಚ್ಛ ಭಾರತ ಮಿಷನ್’ ಅನುದಾನದಲ್ಲಿ ಬಿಎಸ್ಡಬ್ಲ್ಯುಎಂಎಲ್ ‘ಸ್ವೀಪಿಂಗ್ ಮಷಿನ್’ಗಳನ್ನು ಖರೀದಿಸುತ್ತದೆ. ಅವುಗಳನ್ನು ಐದೂ ನಗರ ಪಾಲಿಕೆಗಳಿಗೆ ನೀಡುತ್ತದೆ. ಅವುಗಳನ್ನು ಪಾಲಿಕಗಳೇ ನಿರ್ವಹಣೆ ಮಾಡಿಕೊಳ್ಳಬೇಕು. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಸ ಗುಡಿಸುವ ಯಂತ್ರಗಳ ಮೂಲಕ ನಾಗರಿಕರ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಹೆಚ್ಚಿನ ಹಣವನ್ನು ಬಾಡಿಗೆ ರೂಪದಲ್ಲಿ ನೀಡಿ ಯಾರ ಜೇಬಿಗೆ ತುಂಬಲಾಗುತ್ತಿದೆ? ಎಂಬುದನ್ನು ರಾಜ್ಯ ಸರ್ಕಾರ ತಿಳಿಸಬೇಕು
- ಆರ್. ಅಶೋಕ, ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.