ಬೆಂಗಳೂರು: ಪಠ್ಯಪುಸ್ತಕ, ನೋಟ್ಬುಕ್ಗಳಿಗೆ ಶೂನ್ಯ ಜಿಎಸ್ಟಿ, ಕಾಗದಕ್ಕೆ ಶೇ 18 ಜಿಎಸ್ಟಿ ವಿಧಿಸಿರುವುದು ಗೊಂದಲ ಉಂಟು ಮಾಡಿದೆ. ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಲಾಭವಾಗಲಿದ್ದು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಯಾವುದೇ ಲಾಭವಿಲ್ಲ ಎಂದು ಕರ್ನಾಟಕ ಕಾಗದ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರ ಸಂಘ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಶೂನ್ಯ ಜಿಎಸ್ಟಿ ಮಾಡಿರುವ ಉದ್ದೇಶ ಒಳ್ಳೆಯದಿದೆ. ಆದರೆ, ತಪ್ಪಾದ ನಿಯಮದಿಂದಾಗಿ ಅನುಷ್ಠಾನಕ್ಕೆ ಬರುವುದಿಲ್ಲ. ಬದಲಾಗಿ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ ಎಂದು ಸಂಘದ ಮಾಜಿ ಕಾರ್ಯದರ್ಶಿ ಶರವಣ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಿಲ್ನಿಂದ ಸರಬರಾಜಾಗುವ ಕಾಗದವು ಶಾಲಾ ಪಠ್ಯ ಪುಸ್ತಕಕ್ಕೆ ಬಳಕೆಯಾಗುತ್ತದೆಯೇ? ಇಲ್ಲವೇ? ಎಂಬುದು ಗೊತ್ತಾಗುವುದಿಲ್ಲ. ಅದಕ್ಕೆ ಶೇ 18 ಜಿಎಸ್ಟಿ ಕಟ್ಟಬೇಕು. ಶಾಲಾ ಪಠ್ಯ ಅಥವಾ ನೋಟ್ ಬುಕ್ ತಯಾರಿಸಿದಾಗ ಶೇ 18 ಜಿಎಸ್ಟಿ ವಾಪಸ್ ಬರುವುದಿಲ್ಲ. ಹಾಗಾಗಿ ₹100 ಪುಸ್ತಕ ಖರೀದಿಸಲು ₹118 ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಹಿಂದೆ ಎಲ್ಲದಕ್ಕೂ ಶೇ 12 ಜಿಎಸ್ಟಿ ಇದ್ದಾಗ ಈ ಗೊಂದಲಗಳಿರಲಿಲ್ಲ. ಈಗ ಕಾಗದ ತಯಾರಿ ಮತ್ತು ನೋಟ್ ಬುಕ್, ಪಠ್ಯಪುಸ್ತಕ ತಯಾರಿ ಎಲ್ಲವನ್ನು ಒಂದೇ ಕಡೆ ಮಾಡುವುದು ಕಾರ್ಪೊರೇಟ್ ಕಂಪನಿಗಳು ಮಾತ್ರ. ಅವರಿಗೆ ಶೂನ್ಯ ಜಿಎಸ್ಟಿಯ ಲಾಭ ಸಿಗಲಿದೆ. ಆ ಪುಸ್ತಕಗಳನ್ನು ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡಲು ಸಾಧ್ಯ. ಇದರಿಂದ ಸಣ್ಣದಾಗಿ ವ್ಯಾಪಾರ ಮಾಡಿಕೊಂಡಿರುವ ಕಾಗದ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರು ಅಂಗಡಿಯ ಬಾಗಿಲು ಹಾಕಬೇಕಾದ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಹಿತ ಕಾಪಾಡಲು ಕಾಗದ ಮತ್ತು ಕಾಗದ ಉತ್ಪನ್ನಗಳನ್ನು ಶೇ 5ರ ಜಿಎಸ್ಟಿ ಅಡಿಯಲ್ಲಿ ತರಬೇಕು. ಆ ಮೂಲಕ ನೋಟ್ಬುಕ್, ಪಠ್ಯಪುಸ್ತಕಗಳ ಬೆಲೆ ಏರಿಕೆ ತಡೆಯಬೇಕು. ಜಿಎಸ್ಟಿ ಮಂಡಳಿ ತ್ವರಿತವಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪ್ರವೀಣ್ ಲುಂಕದ್, ಉಪಾಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ಶಿವರಾಮು ಲಾವು, ಸದಸ್ಯರಾದ ಗೋಪಿ, ಪೀಟರ್ ಅನಿಲ್ ಡಿಗೋ, ಪ್ರವೀಣ್ ಪೈ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.