ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್ ಭವನದಲ್ಲಿ 50 ಎಚ್‌ಡಿಯು, 50 ಐಸಿಯು ಹಾಸಿಗೆ ವ್ಯವಸ್ಥೆ: ಆರ್.ಅಶೋಕ

Last Updated 15 ಮೇ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಾಗವಾರ–ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಹಜ್‌ ಭವನದಲ್ಲಿ 100 ಆಮ್ಲಜನಕ ಯುಕ್ತ ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಸದ್ಯದಲ್ಲೇ 50 ಎಚ್‌ಡಿಯು ಮತ್ತು 50 ಐಸಿಯು ಆಸ್ಪತ್ರೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಹಬ್ ಭವನವನ್ನು 400 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಮೊದಲ ಹಂತದಲ್ಲಿ ಆಮ್ಲಜನಕ ಯುಕ್ತಗೊಳಿಸಿರುವ 100 ಹಾಸಿಗೆಗಳನ್ನು ಸಾರ್ವಜನಿಕ ಸೇವೆಗೆ ಲಭ್ಯಗೊಳಿಸಿ ಅವರು ಮಾತನಾಡಿದರು.

ಎಚ್‌ಡಿಯು ಮತ್ತು ಐಸಿಯು ಹಾಸಿಗಳನ್ನಾಗಿ ಪರಿವರ್ತಿಸಲು ಬೇಕಾದ ಸಲಕರಣೆಗಳು ಈಗಾಗಲೇ ಬಂದಿವೆ. ಅವುಗಳ ಜೋಡಣೆ ಕಾರ್ಯವೂ ವೇಗವಾಗಿ ನಡೆಯುತ್ತಿದೆ. ಇದರಿಂದ ಸುತ್ತಮುತ್ತಲ ಜನರಿಗೆ ಅನುಕೂಲ ಆಗಲಿದೆ ಎಂದರು.

‘ತುರ್ತು ಸೇವೆಗಾಗಿ ಎರಡು ಆಂಬ್ಯುಲೆನ್ಸ್‌ಗಳು ದಿನ 24 ಗಂಟೆಯೂ ಲಭ್ಯವಿರುತ್ತವೆ. ರೋಗ ಲಕ್ಷಣಗಳಿಲ್ಲದೆ ಮತ್ತು ತೀವ್ರ ತರನಾದ ರೋಗ ಲಕ್ಷಣಗಳಿಲ್ಲದ ರೋಗಿಗಳಿಗೆ ಇಲ್ಲಿ ಆರೈಕೆ ಮಾಡಲಾಗುವುದು. ರೋಗಿಗಳ ಮೇಲ್ವಿಚಾರಣೆ ಮತ್ತು ಆರೈಕೆಗಾಗಿ ನುರಿತ ವೈದ್ಯರು ಹಾಗೂ ಸಿಬ್ಬಂದಿಗಳು ಲಭ್ಯವಿದ್ದಾರೆ’ ಎಂದು ವಿವರಿಸಿದರು.

ಸೋಂಕಿತರಿಗೆ ಔಷಧ ಮತ್ತು ಊಟ–ಉಪಾಹಾರ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ದಿನ 24 ಗಂಟೆಯೂ ಕಾರ್ಯನಿರ್ವಹಿಸುವ ಟ್ರಯಾಜ್ ಕೇಂದ್ರ ತೆರೆಯಲಾಗಿದೆ.

ಸಾಜನಿಕರ ಅನುಕೂಲಕ್ಕೆ 24×7 ಟ್ರಯಾಜ್ ಸೆಂಟರ್ ಆವರಣದಲ್ಲಿ ರಚಿಸಲಾಗಿದ್ದು, ಸೋಂಕಿತರು ಮತ್ತು ಶಂಕಿತ ಸೋಂಕಿತರು ಇದರ ಅನುಕೂಲವನ್ನು ಉಪಯೋಗಿಸಬಹುದಾಗಿದೆ. ತಪಾಸಣೆಯ ನಂತರ ವೈದ್ಯರ ಸಲಹೆಯ ಮೇರೆಗೆ ಸೋಂಕಿತರಿಗೆ ಹೋಮ್ ಕ್ವಾರಂಟೈನ್, ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಾತಿ ಮಾಡಲಾಗುತ್ತದೆ ಎಂದರು.

‘ನಗರದಲ್ಲಿ ಸೋಂಕಿತರಿಗೆ ಆಮ್ಲಜನಕ ಕೊರತೆ ನೀಗಿಸುವ ನಿಟ್ಟಿನಲ್ಲಿ ಎಲ್ಲ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಆಮ್ಲಜನಕ ವ್ಯವಸ್ಥೆ ಮಾಡಲಾಗುತ್ತಿದೆ. 800ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳನ್ನು ಎಲ್ಲ ಕೋವಿಡ್‌ ಆರೈಕೆ ಕೇಂದ್ರಗಳಿಗೆ ನೀಡಲಾಗಿದೆ. ಜತೆಗೆ ಬಸ್‌ಗಳಲ್ಲು ಸಹ ಆಮ್ಲಜನಕ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿನಿತ್ಯ 100ಕ್ಕೂ ಹೆಚ್ಚು ಆಮ್ಲಜನಕ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವ ರೋಗಿಗೂ ಆಮ್ಲಜನಕ ಸಮಸ್ಯೆ ಆಗದಂತೆ ಸೂಕ್ತ ಕ್ರಮವಹಿಸಲಾಗುವುದು’ ಎಂದು ಹೇಳಿದರು.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಶಾಸಕ‌ ಕೃಷ್ಣ ಬೈರೇಗೌಡ, ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ವಲಯ ಆಯುಕ್ತ ವಿ.ಅನ್ಬುಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ, ಜಂಟಿ ಆಯುಕ್ತ ಸರ್ಫರಾಜ್ ಖಾನ್, ವಲಯ ಜಂಟಿ ಆಯುಕ್ತ ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT