ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಗೆ ಮುತ್ತಿಟ್ಟು ಪರಾರಿಯಾಗಿದ್ದ ಕ್ಯಾಬ್ ಚಾಲಕನ ಬಂಧನ

Published 5 ಆಗಸ್ಟ್ 2024, 16:22 IST
Last Updated 5 ಆಗಸ್ಟ್ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯ ಬಳಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ, ತಬ್ಬಿಕೊಂಡು ಮುತ್ತಿಟ್ಟು ಪರಾರಿಯಾಗಿದ್ದ ಕ್ಯಾಬ್‌ ಚಾಲಕನನ್ನು ಕೋಣನಕುಂಟೆ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕೋಣನಕುಂಟೆಯ ಕೃಷ್ಣಾ ನಗರದಲ್ಲಿ ಆಗಸ್ಟ್‌ 2ರಂದು ಬೆಳಿಗ್ಗೆ 5.15ರ ಸುಮಾರಿಗೆ ಕೊತ್ತನೂರು ದಿಣ್ಣೆಯ ನಿವಾಸಿ ಕ್ಯಾಬ್ ಚಾಲಕ ಸುರೇಶ್‌ (25) ಕೃತ್ಯ ಎಸಗಿದ್ದ. ಘಟನೆಯಿಂದ ಭಯಗೊಂಡಿದ್ದ ಮಹಿಳೆ ಪೊಲೀಸರಿಗೆ ದೂರು ನೀಡಿರಲಿಲ್ಲ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಭಾನುವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು, ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಪೊಲೀಸರ ಸೂಚನೆಯಂತೆ ಮಹಿಳೆ ದೂರು ನೀಡಿದ್ದರು. ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಆರೋಪಿ ವಿರುದ್ಧ ಎಫ್‌ಆರ್‌ ದಾಖಲಿಸಿ, ಬಂಧಿಸಲಾಗಿದೆ.

ಮೂವರ ಅಮಾನತು: ಪ್ರಕರಣದ ಮಾಹಿತಿ ಇದ್ದರೂ ಮಹಿಳೆಯಿಂದ ದೂರು ಪಡೆಯದೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಡಿಸಿಪಿ ಲೋಕೇಶ್ ಅಮಾನತುಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT