ಬೆಂಗಳೂರು: ‘ನಗರದ ಪ್ರಮುಖ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಇಡಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ 99ನೇ ಜನ್ಮದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

‘ರಾಮಕೃಷ್ಣ ಹೆಗಡೆ ಅವರ ಹೆಸರು ಶಾಶ್ವತವಾಗಿ ಉಳಿಯಬೇಕು. ಹೀಗಾಗಿ ಎಲ್ಲರೊಂದಿಗೆ ಜೊತೆ ಚರ್ಚೆ ಮಾಡಿ, ನಗರದ ಪ್ರಮುಖ ಸ್ಥಳಕ್ಕೆ ಅವರ ಹೆಸರು ಇಡಲಾಗುವುದು. ಇದಕ್ಕೆ ನಾನು ಬದ್ಧ’ ಎಂದರು.

‘ಹೆಗಡೆ ಅವರು ಕನಕಪುರದಿಂದ ಸ್ಪರ್ಧೆ ಮಾಡಿದ್ದರು. ಅವರನ್ನು ಸೋಲಿಸಲು ನಾನು ವಿದ್ಯಾರ್ಥಿ ನಾಯಕನಾಗಿ ಹೋರಾಟ ಮಾಡಿದೆ. ನನ್ನ ಹೋರಾಟ ಗಮನಿಸಿ 1985ರಲ್ಲಿ ಪಕ್ಷ ನನಗೆ ಟಿಕೆಟ್ ನೀಡಿತು. ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಹಿನ್ನಡೆಯಾದಾಗ, ನನ್ನ ನಾಯಕತ್ವಕ್ಕೆ ಬೆಂಬಲ ಸಿಗಲಿಲ್ಲ ಎಂದು ಮತ್ತೆ ಚುನಾವಣೆಗೆ ಹೋದರು’ ಎಂದು ಮೆಲುಕು ಹಾಕಿದರು.

‘ಹೆಗಡೆ ಅವರು ಬಿಟ್ಟುಹೋದ ಆದರ್ಶ, ಸಾಕ್ಷಿಗುಡ್ಡೆಗಳು ಇನ್ನೂ ಜೀವಂತವಾಗಿವೆ. ಅವರು ದೂರದೃಷ್ಟಿವುಳ್ಳ ನಾಯಕ. ತಮ್ಮ ಜಾತಿಯವರು, ಮನೆಯವರನ್ನು ಬೆಳೆಸಬೇಕು ಎಂಬ ಹಂಬಲ ಇರಲಿಲ್ಲ. ನೂರಾರು ನಾಯಕರನ್ನು ಬೆಳೆಸಿದ್ದಾರೆ. ಕೆಲವರು ಅವರ ಪ್ರಾಮಾಣಿಕತೆಗೆ ನಿಯತ್ತು ತೋರಿದರು. ಮತ್ತೆ ಕೆಲವರು ಹತ್ತಿದ ಏಣಿಯನ್ನು ಒದೆಯುವಂತೆ ಬಿಸಾಕಿದರು. ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟನೆ ಮಾಡಿದ ದಿನ ನನಗೆ ಚೆನ್ನಾಗಿ ನೆನಪಿದೆ. ನಾನು ವಿಧಾನಸಭೆಗೆ ಹೋಗುತ್ತಿರುವಾಗ ದೇಶಪಾಂಡೆ ಅವರು ಗಾಬರಿಯಿಂದ ಕೆಳಗೆ ಇಳಿದು ಬರುತ್ತಿದ್ದರು. ನಾನು ಯಾಕೆ ಎಂದು ಕೇಳಿದೆ. ಆ ಸಂದರ್ಭದಲ್ಲಿ ಕೇವಲ ದೇಶಪಾಂಡೆ ಮಾತ್ರ ಧ್ವನಿ ಎತ್ತಿದ್ದರು, ಉಳಿದವರು ಅಧಿಕಾರದ ಆಸೆಯಿಂದ ಮೌನಕ್ಕೆ ಶರಣಾಗಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.