ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರೋಲ್‌ ಶಿಫಾರಸು: ವೈದ್ಯರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಆದೇಶ

Last Updated 29 ಏಪ್ರಿಲ್ 2022, 19:01 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಪಾಂಡಿಲೈಟಿಸ್‌ನಿಂದ (ಬೆನ್ನುಮೂಳೆಯ ಕಾಯಿಲೆ) ಹಾಸಿಗೆ ಹಿಡಿದಿರುವ ನನ್ನ ತಾಯಿಯನ್ನು ಕೆಲ ದಿನ ಆರೈಕೆ ಮಾಡಲು ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿ
ಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದ ಕೈದಿಯೊಬ್ಬರ ಮನವಿಯನ್ನು ಹೈಕೋರ್ಟ್‌ ತಳ್ಳಿ ಹಾಕಿದೆ.

ಇದೇ ವೇಳೆ, ‘ಕೈದಿಯ ತಾಯಿ ಸ್ಪಾಂಡಿಲೈಟಿಸ್‌ನಿಂದ ನರಳುತ್ತಿದ್ದು ಅವರನ್ನು ಖುದ್ದು ಆರೈಕೆ ಮಾಡಲು 2ರಿಂದ 3 ವಾರಗಳ ಕಾಲ ಪೆರೋಲ್ ಮೇಲೆ ಬಿಡುಗಡೆಗೆ ಅವಕಾಶ ನೀಡಬೇಕು’ ಎಂದು ಶಿಫಾರಸು ಮಾಡಿ ಪ್ರಮಾಣ ಪತ್ರ ನೀಡಿದ್ದ ವೈದ್ಯರ ವಿರುದ್ಧ ಸೂಕ್ತ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ವೈದ್ಯಕೀಯ ಮಂಡಳಿಗೆ ಆದೇಶಿಸಿದೆ.

ಮಡಿವಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣದಲ್ಲಿ ವಾಸುದೇವ ಅಲಿಯಾಸ್ ವಾಸು (37) ಪ್ರಮುಖ ಆರೋಪಿಯಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಎಂ.ವಿನೋದ್ ಕುಮಾರ್, ಅರ್ಜಿದಾರ ಆರೋಪಿಗೆ ‘ಲೈಫ್‌ ಕೇರ್‌ ಆಸ್ಪತ್ರೆ’ ನಿರ್ವಾಹಕ ನಿರ್ದೇಶಕರು ನೀಡಿದ್ದ ಶಿಫಾರಸು ಪತ್ರವನ್ನು ಆಕ್ಷೇಪಿಸಿ, ಪೆರೋಲ್‌ ನೀಡದಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT