ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದು ‘ಹೈ ವೋಲ್ಟೇಜ್ ಯಕ್ಷಗಾನ’

Published 31 ಮೇ 2024, 20:10 IST
Last Updated 31 ಮೇ 2024, 20:10 IST
ಅಕ್ಷರ ಗಾತ್ರ

ಐದಾರು ಪೌರಾಣಿಕ ಪ್ರಸಂಗಗಳನ್ನು ಒಳಗೊಂಡ ‘ಹೈ ವೋಲ್ಟೇಜ್ ಯಕ್ಷಗಾನ’ ಪ್ರದರ್ಶನ ನಡೆಯಲಿದೆ.

‘ಯಕ್ಷ ಶರವಣ’ ಹೆಸರಿನ ಪೌರಾಣಿಕ ಪ್ರಸಂಗಗಳ ಪ್ರಮುಖ ಘಟ್ಟಗಳ ಅಪರೂಪದ, ಭರಪೂರ ‘ಕಲಾ ಪರ್ವ’ ಜೂನ್ 1ರ ಶನಿವಾರ ರಾತ್ರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಭಸ್ಮಾಸುರ, ಧರ್ಮಾಂಗದ, ಲವ-ಕುಶ, ಕಾರ್ತವೀರ್ಯ, ಶಶಿಪ್ರಭೆ... ಹೀಗೆ ಐದು ಅಪರೂಪದ ಪ್ರಸಂಗಗಳು; ಒಂದೇ ರಾತ್ರಿ 40ಕ್ಕೂ ಹೆಚ್ಚು ಮೇರು ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಮಲೆನಾಡು-ಕರಾವಳಿ ಭಾಗದ ಹಿಮ್ಮೇಳ-ಮುಮ್ಮೇಳದ  ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಸಣ್ಣ-ಸಾಹಸವಲ್ಲ. ಇಂಥ ಮಹ್ಹೋನ್ನತ ಪ್ರಯೋಗಕ್ಕೆ ಮುಂದಾಗಿರುವ ಮನೋಜ್ ಭಟ್, ಕಳೆದ 18 ವರ್ಷಗಳಿಂದ ನಿರಂತರ ಪ್ರಯೋಗವನ್ನು ಬೆಂಗಳೂರಿನ ವೀಕ್ಷಕರಿಗಾಗಿ ಮಾಡುತ್ತಲೇ ಬಂದಿದ್ದಾರೆ. ಆ ಮೂಲಕ ನಶಿಸುತ್ತಿರುವ ಕಲೆ-ಕಲಾವಿದರ ಉಳಿವಿಗೆ ಶ್ರಮಿಸುತ್ತಿದ್ದಾರೆ.

ಅಂದು ರಾತ್ರಿ 9-26ರಿಂದ ಮರುದಿನ ಬೆಳಿಗ್ಗೆ 6-16ರವರೆಗೆ ನಿರಂತರ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಸಂಖ್ಯೆ-9880 604186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT