ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಪರಿಹಾರ ನೀಡದಿದ್ದರೆ ಭೂಮಿ ವಾಪಸ್‌: ನೈಸ್‌ ಸಂಸ್ಥೆ ವಿರುದ್ಧ ರೈತರ ಆಕ್ರೋಶ

ಉಪನಗರ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿ--; ನೈಸ್‌ ಸಂಸ್ಥೆ ವಿರುದ್ಧ ರೈತರ ಆಕ್ರೋಶ
Last Updated 27 ಮಾರ್ಚ್ 2023, 20:16 IST
ಅಕ್ಷರ ಗಾತ್ರ

ಬೆಂಗಳೂರು: ನೈಸ್‌ ಸಂಸ್ಥೆಯು ಉಪನಗರ ನಿರ್ಮಾಣಕ್ಕೆಂದು ಭೂಮಿ ಸ್ವಾಧೀನಪಡಿಸಿಕೊಂಡ ರೈತರಿಗೆ 2013 ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕೆಐಎಡಿಬಿ) ನಿಗದಿ ಪಡಿಸಿದ ದರದಲ್ಲಿ ಪರಿಹಾರ ನೀಡದಿದ್ದರೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿ ರೈತರಿಗೆ ಭೂಮಿ ವಾಪಸ್‌ ಕೊಡಿಸಲು ಕ್ರಮವಹಿಸಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸೋಮವಾರ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಸಭೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

26 ವರ್ಷಗಳ ಹಿಂದೆ ಉಪನಗರ ನಿರ್ಮಾಣಕ್ಕೆಂದು 1906 ಎಕರೆ ಜಾಗ ವಶಪಡಿಸಿಕೊಳ್ಳಲಾಗಿತ್ತು. 9–10 ಹಳ್ಳಿಗಳಿಗೆ ಪರಿಹಾರ ಅಂತಿಮವಾಗಿರಲಿಲ್ಲ. 2013 ರಲ್ಲಿ ಕೆಐಎಡಿಬಿ ಹೊಸ ದರ ಅಂತಿಮಗೊಳಿಸಿತ್ತು. ಅದರ ಪ್ರಕಾರ ನೈಸ್‌ ಸಂಸ್ಥೆ ಪರಿಹಾರ ನೀಡಬೇಕು. ನಗರ ಪ್ರದೇಶದಲ್ಲಿ 1:2, ಗ್ರಾಮಾಂತರ ಭಾಗದಲ್ಲಿ 1:4 ರಂತೆ ಅಂತಿಮಗೊಳಿಸಿದ್ದಾರೆ. 1 ಎಕರೆಗೆ ₹3 ಕೋಟಿಗೂ ಅಧಿಕ ಪರಿಹಾರದ ಮೊತ್ತವನ್ನು ಕೆಐಎಡಿಬಿ ನಿಗದಿಪಡಿಸಿದೆ. ಆದರೆ ನೈಸ್‌ ಕಂಪನಿಯವರು ₹41 ಲಕ್ಷಕ್ಕೆ ಸೀಮಿತ ಮಾಡಿ ರೈತರಿಗೆ ಅನ್ಯಾಯ ಎಸಗಿದ್ದಾರೆ ಎಂದರು.

ರೈತರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎಕರೆಗೆ ₹3 ಕೋಟಿಗೂ ಅಧಿಕ ಪರಿಹಾರ ನೀಡದಿದ್ದರೆ, ನಿಯಮಾನುಸಾರ ಸ್ವಾಧೀನಪಡಿಸಿಕೊಂಡ ಭೂಮಿ ವಾಪಸ್‌ ಕೊಡಬೇಕು ಎಂದು ಹೇಳಿದರು.

ನೈಸ್‌ ಸಂಸ್ಥೆಯ ಮೇಲೆ ಸರ್ಕಾರಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್‌ನಲ್ಲಿ ನೈಸ್‌ ಸಂಸ್ಥೆ ದಾಖಲಿಸಿದ್ದ ಕೇಸ್‌ಗಳು ಒಂದೊಂದಾಗಿ ವಜಾ ಆಗುತ್ತಿವೆ. ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣಗಳ ಮೇಲೆ ನಿಗಾ ವಹಿಸಲು ಸರ್ಕಾರ ವಕೀಲರನ್ನು ನೇಮಕ ಮಾಡಿದೆ. ಟೋಲ್‌ ದರ ಸಂಬಂಧ ನೈಸ್‌ ಸುಪ್ರೀಂಕೋರ್ಟ್‌ನಿಂದ ತಡೆ ತಂದಿದ್ದಾರೆ. ತಡೆ ತೆರವು ಸಂಬಂಧ ವಕೀಲರೊಂದಿಗೆ ಚರ್ಚೆ ನಡೆಸಲಾಗಿದೆ. ಸಂಪೂರ್ಣ ಸಿಮೆಂಟ್‌ ರಸ್ತೆ ಮಾಡಿ ಟೋಲ್‌ ಸಂಗ್ರಹಿಸಬೇಕಿತ್ತು. ಈ ಬಗ್ಗೆ ನೈಸ್‌ ಸುಪ್ರೀಂಕೋರ್ಟ್‌ನಲ್ಲಿ ತಡೆ ತಂದಿದ್ದು, ಸದ್ಯದಲ್ಲೇ ತಡೆ ತೆರವಾಗುವ ಸಾಧ್ಯತೆ ಇದೆ ಎಂದು ಸೋಮಶೇಖರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT