ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ ರೈಲು: ನಾಗಸಂದ್ರ–ಮಾದಾವರ ನಿಲ್ದಾಣಗಳ ನಡುವೆ ಅ.3,4ರಂದು ಸುರಕ್ಷತಾ ತಪಾಸಣೆ

ನಾಗಸಂದ್ರ–ಮಾದಾವರ ನಡುವೆ ‘ಮೆಟ್ರೊ’ ಸೇವೆ, ಅಕ್ಟೋಬರ್‌ 2ನೇ ವಾರದಲ್ಲಿ ವಾಣಿಜ್ಯ ಸಂಚಾರ ಸಾಧ್ಯತೆ
Published : 28 ಸೆಪ್ಟೆಂಬರ್ 2024, 20:51 IST
Last Updated : 28 ಸೆಪ್ಟೆಂಬರ್ 2024, 20:53 IST
ಫಾಲೋ ಮಾಡಿ
Comments

ಬೆಂಗಳೂರು: ರೈಲ್ವೆ ಸುರಕ್ಷತಾ ಆಯುಕ್ತರು ‘ನಮ್ಮ ಮೆಟ್ರೊ’ ಹಸಿರು ಮಾರ್ಗದ ವಿಸ್ತರಿತ ಪ್ರದೇಶ  ನಾಗಸಂದ್ರ–ಮಾದಾವರ ನಿಲ್ದಾಣಗಳ ನಡುವೆ ಅ.3 ಮತ್ತು 4ರಂದು ಸುರಕ್ಷತಾ ತಪಾಸಣೆ ನಡೆಸಲಿದ್ದಾರೆ.

ಹಸಿರು ಮಾರ್ಗದಲ್ಲಿ ವಿಸ್ತರಿತಗೊಂಡಿರುವ 3.7 ಕಿ.ಮೀ ದೂರದ ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್‌), ಮಾದಾವರ ಮೆಟ್ರೊ ನಿಲ್ದಾಣಗಳಿವೆ. ಸಿವಿಲ್‌ ಕಾಮಗಾರಿ ಬಳಿಕ ಆಗಸ್ಟ್‌ನಿಂದ ಸಾಮರ್ಥ್ಯ ಪರೀಕ್ಷೆ, ಸಿಗ್ನಲಿಂಗ್‌, ದೂರಸಂಪರ್ಕ, ವಿದ್ಯುತ್‌ ಸರಬರಾಜು ವ್ಯವಸ್ಥೆ ಸಿಸ್ಟಂ ಸಂಯೋಜನೆ, ಸಾಮರ್ಥ್ಯ ಪರಿಶೀಲನೆ ಸಹಿತ ಪ್ರಮುಖ ಪರೀಕ್ಷೆಗಳು ನಡೆದಿದ್ದವು.  

ಸುರಕ್ಷತಾ ಆಯುಕ್ತರು ಪರಿಶೀಲಿಸಬೇಕು ಎಂದು ಬಿಎಂಆರ್‌ಸಿಎಲ್‌, ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದಿತ್ತು. ಸುರಕ್ಷತಾ ಆಯುಕ್ತ ಅನಂತ್‌ ಮಧುಕರ್‌ ಚೌಧರಿ ನೇತೃತ್ವದ ತಂಡವು ಅ.3, 4ರಂದು ನಡೆಸಲಿದೆ ಎಂದು ರೈಲ್ವೆ ಸುರಕ್ಷತೆ/ಟೆಕ್‌ ದಕ್ಷಿಣ ವೃತ್ತದ ಉಪ ಆಯುಕ್ತರು ಬಿಎಂಆರ್‌ಸಿಎಲ್‌ಗೆ ಮಾಹಿತಿ ನೀಡಿದ್ದಾರೆ.

15 ದಿನದಲ್ಲಿ ವಾಣಿಜ್ಯ ಸಂಚಾರ?: ‘ಗುಣಮಟ್ಟ ಪರೀಕ್ಷೆ ತೃಪ್ತಿಕರವಾದರೆ ಆಯುಕ್ತರು ಆ ನಂತರ ಒಂದು ವಾರದಲ್ಲಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಆ ಪ್ರಕಾರ, ಅಕ್ಟೋಬರ್‌ ಎರಡನೇ ವಾರದಲ್ಲಿ ವಾಣಿಜ್ಯ ಸಂಚಾರ ಆರಂಭಗೊಳ್ಳಬಹುದು’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸುರಕ್ಷತಾ ಆಯುಕ್ತರು ಗುಣಮಟ್ಟ ತಪಾಸಣೆ ನಡೆಸಿದ ಮೇಲೆ ಅವರು ಸೂಚಿಸಿದ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಯುಕ್ತರು ಬರುವ ಮೊದಲು ಎಲ್ಲ ಪರೀಕ್ಷೆಗಳನ್ನು ನಡೆಸಿ ನ್ಯೂನತೆಗಳನ್ನು ಸರಿಪಡಿಸಿರುವುದರಿಂದ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ’ ಎಂದು ತಿಳಿಸಿದ್ದಾರೆ.

ಹಸಿರು ಮಾರ್ಗದ ಅಭಿವೃದ್ಧಿ ವಿವಿಧ ಹಂತಗಳಲ್ಲಿ ನಡೆದಿದ್ದು, ನಾಗಸಂದ್ರ–ಮಾದಾವರ ಕೊನೆಯ ಹಂತವಾಗಿದೆ. ಕಾಮಗಾರಿ 2017 ರಲ್ಲಿ ಆರಂಭವಾಗಿದ್ದು, 2019ರಲ್ಲಿ ಪೂರ್ಣಗೊಳ್ಳಬೇಕಿತ್ತು.

ಭೂಸ್ವಾಧೀನದ ವಿರುದ್ಧ ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದು ಹಾಗೂ ’ಕೋವಿಡ್‌’ ನಿಂದಾಗಿ 5 ವರ್ಷ ತಡವಾಗಿದ್ದು, ಈ ಸಂಚಾರಕ್ಕೆ ಸಿದ್ಧವಾಗುತ್ತಿದೆ.

ಮೆಟ್ರೊ ರೈಲು ಸಂಚಾರ ಸೇವೆಯು ಆರಂಭವಾದರೆ ನೆಲಮಂಗಲ, ಮಾಕಳಿ, ಮಾದನಾಯಕನಹಳ್ಳಿ ಆಸುಪಾಸಿನ ಪ್ರದೇಶಗಳ ನಿವಾಸಿಗಳಿಗೆ ನಗರಕ್ಕೆ ಬರುವವರಿಗೆ ಅನುಕೂಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಸಿರು ಮಾರ್ಗದ 3.7 ಕಿ.ಮೀ. ದೂರದ ವಿಸ್ತರಿತ ಮಾರ್ಗ ‘ ‘ಸಿಗ್ನಲಿಂಗ್, ವಿದ್ಯುತ್ ಪೂರೈಕೆ, ಸಾಮರ್ಥ್ಯ ಪರೀಕ್ಷೆ ಯಶಸ್ವಿ ನೆಲಮಂಗಲ, ಮಾಕಳಿ ವ್ಯಾಪ್ತಿಯ ನಿವಾಸಿಗಳಿಗೆ ಅನುಕೂಲ

‘ಗುಣಮಟ್ಟ ತೃಪ್ತಿಕರ ಎನಿಸಿದರೆ ವಾರದಲ್ಲೇ ಅನುಮತಿ’

‘ಗುಣಮಟ್ಟ ಪರೀಕ್ಷೆ ತೃಪ್ತಿಕರವಾದರೆ ಆಯುಕ್ತರು ಆ ನಂತರ ಒಂದು ವಾರದಲ್ಲಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಆ ಪ್ರಕಾರ, ಅಕ್ಟೋಬರ್‌ ಎರಡನೇ ವಾರದಲ್ಲಿ ವಾಣಿಜ್ಯ ಸಂಚಾರ ಆರಂಭಗೊಳ್ಳಬಹುದು’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸುರಕ್ಷತಾ ಆಯುಕ್ತರು ಗುಣಮಟ್ಟ ತಪಾಸಣೆ ನಡೆಸಿದ ಮೇಲೆ ಅವರು ಸೂಚಿಸಿದ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಯುಕ್ತರು ಬರುವ ಮೊದಲು ಎಲ್ಲ ಪರೀಕ್ಷೆಗಳನ್ನು ನಡೆಸಿ ನ್ಯೂನತೆಗಳನ್ನು ಸರಿಪಡಿಸಿರುವುದರಿಂದ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT