ಬುಧವಾರ, ಜೂನ್ 16, 2021
28 °C

ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎರಡು ದಿನಗಳ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವವನ್ನು ಫೆ.25 ಮತ್ತು 26ರಂದು ಬಿಎಂಎಸ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ವಿವಿಪುರ ಮತ್ತು ಬಿಎಂಎಸ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್ ಬಸವನಗುಡಿಯಲ್ಲಿ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ನಟರಾದ ರಮೇಶ್ ಅರವಿಂದ್ ಮತ್ತು ವಿಜಯರಾಘವೇಂದ್ರ, ನಟಿ ಶಾನ್ವಿ ಶ್ರೀವಾತ್ಸವ ಹಾಗೂ ರಾಧಿಕಾ ಚೇತನ್ ಪಾಲ್ಗೊಳ್ಳಲಿದ್ದಾರೆ.

ಈ ವರ್ಷ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವವು ಫಿಟ್ ಇಂಡಿಯ ಆಂದೋಲನವನ್ನು   ಬೆಂಬಲಿಸಲಿದೆ. ಈ ಉತ್ಸವದಲ್ಲಿ ಮುನ್ನೂರಕ್ಕೂ ಹೆಚ್ಚು ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವೈಯರ್‌ ಲೆಸ್‌ ವಾಕಿಂಗ್ ಪಿಟೀಲು ವಾದಕ ಡಾ. ಅನಿಲ್ ವಿದ್ಯಾಶಂಕರ ಅವರ ಪಿಟೀಲು ವಾದನ ಪ್ರದರ್ಶನ ವಿಶೇಷವಾಗಿದೆ. 

ಅಂತರ ಕಾಲೇಜು ಉತ್ಸವ ‘ಸಂಸ್ಕೃತಿ 20–20’ ಫೆ. 25, ರಂದು ಸಂಜೆ 7 ಗಂಟೆಗೆ ಬಸವನಗುಡಿಯ ಗೂಗಲ್ ರಸ್ತೆಯಲ್ಲಿರುವ ಬಿಎಂಎಸ್ ಕಾಲೇಜ್ ಫಾರ್ ವುಮೆನ್ ಆವರಣದಲ್ಲಿ ನಡೆಯಲಿದೆ.

ರಸಪ್ರಶ್ನೆ , ಉತ್ಪನ್ನ ಬಿಡುಗಡೆ, ರೇಡಿಯೊ ಜಾಕಿ, ಮ್ಯಾಡ್ ಜಾಹೀರಾತುಗಳ ತಯಾರಿ, ಹೀಗೆ 15 ವಿಭಿನ್ನ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಬಹುದು. ಹಾಗೇ ಮಿಸ್ಟರ್ 20-20 ಫ್ಯಾಷನ್ ಷೋ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು