ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ‘ಐ–ಫೋನ್’ ಜಾಹೀರಾತು; ₹ 7.29 ಲಕ್ಷ ವಂಚನೆ

Last Updated 2 ಆಗಸ್ಟ್ 2021, 16:12 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿ ಐ–ಫೋನ್‌ಗಳನ್ನು ಖರೀದಿಸಲು ಮುಂದಾಗಿದ್ದ ನಗರ ನಿವಾಸಿಯೊಬ್ಬರು ₹ 7.29 ಲಕ್ಷ ಕಳೆದುಕೊಂಡಿದ್ದಾರೆ.

ವಂಚನೆಗೀಡಾಗಿರುವ ಚನ್ನಸಂದ್ರದ 30 ವರ್ಷದ ನಿವಾಸಿಯೊಬ್ಬರು ಪಶ್ಚಿಮ ವಿಭಾಗ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಫೇಸ್‌ಬುಕ್‌ನಲ್ಲಿ ತೆರೆಯಲಾಗಿರುವ ‘ಅಬುಬಿ ಸ್ಪೋರ್ಟ್ಸ್’ ಪುಟದಲ್ಲಿ ಜಾಹೀರಾತು ನೀಡಿದ್ದ ಆರೋಪಿ, ‘ಕಡಿಮೆ ದರದಲ್ಲಿ ಐ–ಫೋನ್‌ಗಳು ಮಾರಾಟಕ್ಕಿವೆ’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ, ‘ಐ–ಫೋನ್ ಖರೀದಿಸುತ್ತೇನೆ’ ಎಂದು ಹೇಳಿ ಆರೋಪಿಗೆ ಸಂದೇಶ ಕಳುಹಿಸಿದ್ದರು. ಆತನ ಮೊಬೈಲ್ ನಂಬರ್ ಪಡೆದು ಮಾತನಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮುಂಗಡವಾಗಿ ಹಣ ಪಾವತಿ ಮಾಡಿದರೆ ಐ–ಫೋನ್‌ಗಳನ್ನು ನೀಡುವುದಾಗಿ ಆರೋಪಿ ಹೇಳಿದ್ದ. ಅದನ್ನೂ ನಂಬಿದ್ದ ದೂರುದಾರ, ಆರೋಪಿ ಹೇಳಿದ್ದ ಖಾತೆಗಳಿಗೆ ಜುಲೈ 26ರಿಂದ 30ರವರೆಗೆ ಹಂತ ಹಂತವಾಗಿ ₹ 7.29 ಲಕ್ಷ ಪಾವತಿಸಿದ್ದರು. ಅದಾದ ನಂತರ ಆರೋಪಿ ಐ–ಫೋನ್‌ಗಳನ್ನು ಕೊಟ್ಟಿಲ್ಲ. ಹಣವನ್ನೂ ವಾಪಸು ನೀಡಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಐ–ಫೋನ್ ಮಾರಾಟದ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸಲೆಂದೇ ಆರೋಪಿ, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿರುವುದು ಗೊತ್ತಾಗುತ್ತಿದೆ. ಇಂಟರ್‌ನೆಟ್ ಪ್ರೋಟೊಕಾಲ್ (ಐ.ಪಿ) ಮಾಹಿತಿ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT