ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.14ಕ್ಕೆ ‘ಜಾಮ್’ ಪ್ರವೇಶ ಪರೀಕ್ಷೆ

Last Updated 10 ಸೆಪ್ಟೆಂಬರ್ 2020, 2:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‍ಸಿ) ‘ಸ್ನಾತಕೋತ್ತರ ಜಂಟಿ ಪ್ರವೇಶ ಪರೀಕ್ಷೆ’ಯನ್ನು (ಜಾಮ್) ಫೆಬ್ರುವರಿ 14ರಂದು ಆನ್‍ಲೈನ್ ಮೂಲಕ ನಡೆಸಲಿದೆ.

'ಪರೀಕ್ಷೆಯು ದೇಶದ ಹಲವೆಡೆ ನಡೆಯಲಿದೆ. ಅರ್ಜಿ ಸಲ್ಲಿಸಲು ಸೆ.10ರಿಂದ ಅಕ್ಟೋಬರ್ 15ರವರೆಗೆ ಪೋರ್ಟಲ್ ತೆರೆದಿರುತ್ತದೆ' ಎಂದು ಸಂಸ್ಥೆಯ ನಿರ್ದೇಶಕ ಗೋವಿಂದನ್ ರಂಗರಾಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಥೆಯಲ್ಲಿ 2021-22ನೇ ಸಾಲಿಗೆ ಪಿಎಚ್.ಡಿ, ಎಂ.ಎಸ್‍ಸಿ, ಅರ್ಥಶಾಸ್ತ್ರ, ಸಂಶೋಧನೆ ಹಾಗೂ ವಿವಿಧ ಸ್ನಾತಕೋತ್ತರ ಕೋರ್ಸ್‍ಗಳ ಪ್ರವೇಶಕ್ಕೆ ಈ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಮಾನ್ಯ ಮಾಡಲಾಗುವುದು. ಯಾವುದೇ ವಯೋಮಿತಿ ಇರುವುದಿಲ್ಲ ಎಂದು ತಿಳಿಸಿದೆ.

ಮಾಹಿತಿಗೆ ಸಂಸ್ಥೆಯ ವೆಬ್‍ಸೈಟ್ http://jam.iisc.ac.in ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT