ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಸಾಹಿತ್ಯ ಸಮ್ಮೇಳನ: ಮೂಡ್ನಾಕೂಡು ಉದ್ಘಾಟನೆ

ಮೂರು ಗೋಷ್ಠಿ, ಕವಿಗೋಷ್ಠಿ, ವ್ಯಂಗ್ಯ ಚಿತ್ರ ಪ್ರದರ್ಶನ
Last Updated 5 ಜನವರಿ 2023, 22:43 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್.ವೃತ್ತದ ಅಲುಮ್ನಿ ಅಸೋಷಿಯೇಷನ್‌ ಆವರಣದ ಸಂತ ಶಿಶುನಾಳ ಶರೀಫ ಮತ್ತು ಗುರುಗೋವಿಂದ ಭಟ್ಟ ಸಭಾಂಗಣದಲ್ಲಿ ಜ.8ರಂದು ನಡೆಯಲಿರುವ ಜನ ಸಾಹಿತ್ಯ ಸಮ್ಮೇಳನವನ್ನು ಕವಿ ಮೂಡ್ನಾ
ಕೂಡು ಚಿನ್ನಸ್ವಾಮಿ ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ 10ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಾನು ಮುಷ್ತಾಕ್‌ ವಹಿಸುವರು. ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡುವರು. ಎಸ್‌.ಜಾಫೆಟ್‌, ಜಾಣಗೆರೆ ವೆಂಕಟರಾಮಯ್ಯ, ಜೆನ್ನಿ,
ಅಗ್ನಿ ಶ್ರೀಧರ್, ಅಕ್ಕೈ ಪದ್ಮಶಾಲಿ, ವಡ್ಡಗೆರೆ ನಾಗರಾಜಯ್ಯ ಉಪಸ್ಥಿತರಿರುವರು.

ಸಮ್ಮೇಳನದ ಸಮಾರೋಪ ಸಂಜೆ 5ಕ್ಕೆ ನಡೆಯಲಿದ್ದು, ಕೆ.ಮರುಳಸಿದ್ದಪ್ಪ ಸಮಾರೋಪ ಭಾಷಣ ಮಾಡುವರು. ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಸಿ.ಬಸವಲಿಂಗಯ್ಯ, ಪಿಚ್ಚಳ್ಳಿ ಶ್ರೀನಿವಾಸ್‌, ದು.ಸರಸ್ವತಿ, ಯು.ಟಿ.ಫರ್ಜಾನ, ವಸಂತರಾಜ್, ಅನಂತ್ ನಾಯಕ್, ರವಿಕುಮಾರ್ ಟೆಲೆಕ್ಸ್ ಭಾಗವಹಿಸುವರು. ಅಂದು ಬೆಳಿಗ್ಗೆ 9ಕ್ಕೆ ವಾಟಾಳ್‌ ನಾಗರಾಜ್, ಶಿವರಾಮೇಗೌಡ, ಬಿ.ಎನ್‌.ಜಗದೀಶ್‌ ಕನ್ನಡ ಧ್ವಜಾರೋಹಣ ನೆರವೇರಿಸುವರು.

9.30ಕ್ಕೆ ಬಂಡಾಯದ ಗೆರೆಗಳು: ವ್ಯಂಗ್ಯಚಿತ್ರ ಮತ್ತು ಪೋಸ್ಟರ್‌ಗಳ ಪ್ರದರ್ಶನಕ್ಕೆ ರಘುನಂದನ ಚಾಲನೆ ನೀಡುವರು. ಪಿ.ಮಹಮದ್‌, ದಿನೇಶ್‌ ಕುಕ್ಕುಜಡ್ಕ, ಸತೀಶ್‌ ಆಚಾರ್ಯ, ಪಂಜುಗಂಗೊಳ್ಳಿ, ಬಾದಲ್‌ ನಂಜುಂಡಸ್ವಾಮಿ, ಚಂದ್ರಶೇಖರ್‌ ಶೆಟ್ಟಿ, ಚೇತನ್‌ ಪುತ್ತೂರು, ಸರೋವರ್ ಬೆಂಕಿಕೆರೆ, ಉದಯ್‌ ಗಾಂವ್ಕರ್‌, ನವೀನ್‌ ಹಾಸನ ಮತ್ತಿತರರು ಭಾಗವಹಿಸುವರು.

ಮಧ್ಯಾಹ್ನ 12.30ರಿಂದ ವಿಚಾರಗೋಷ್ಠಿ ಆರಂಭವಾಗಲಿದೆ. ಡಾ.ಮಹಮದ್‌ ಮುಸ್ತಾಫಾ ಅವರು ‘ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ’ ಕುರಿತು, ಟಿ.ಗುರುರಾಜ್‌ ಅವರು ‘ಕನ್ನಡ ನಾಡು ನುಡಿಗೆ ಟಿಪ್ಪು ಕೊಡುಗೆಗಳು’ ಕುರಿತು ವಿಷಯ ಮಂಡಿಸುವರು, ನಾ. ದಿವಾಕರ್ ಅಧ್ಯಕ್ಷತೆ ವಹಿಸುವರು. ಈ ಸಮಯದಲ್ಲಿ ಲಿಂಗದೇವರು ಹಳೆಮನೆ ಸಂಪಾದಕತ್ವದ ‘ಧೀರ ಟಿಪ್ಪು ಲಾವಣಿಗಳು’ ಗುರುರಾಜ್‌ ಅವರ ‘ನಮ್ಮ ಟಿಪ್ಪು– ವಂದತಿ ಮತ್ತು ಸತ್ಯ ಸಂಗತಿ’ ಪುಸ್ತಕಗಳ ಬಿಡುಗಡೆ ಮಾಡಲಾಗುತ್ತದೆ.

ಮಧ್ಯಾಹ್ನ 1.30ರಿಂದ ಆಹಾರಗೋಷ್ಠಿ ನಡೆಯಲಿದೆ. ರಂಗನಾಥ್‌ ಕಂಟನಕುಂಟೆ, ಪಲ್ಲವಿ ಇಡೂರ್‌ ಅವರು ‘ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ ವಿಷಯ ಮಂಡನೆ ಮಾಡುವರು. ಮಧ್ಯಾಹ್ನ 2ರಿಂದ ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3ರಿಂದ ಮೂರನೇ ಗೋಷ್ಠಿ ನಡೆಯಲಿದೆ. ‘ಸೌಹಾರ್ದತೆ ಮತ್ತು ಕನ್ನಡತನ’ ಕುರಿತು ರಾಜೇಂದ್ರ ಚೆನ್ನಿ, ‘ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾಳಿ: ಸಾಹಿತ್ಯ ಲೋಪದ ಜವಾಬ್ದಾರಿಗಳು’ ಕುರಿತು ಮಾವಳ್ಳಿ ಶಂಕರ್, ‘ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು’ ಕುರಿತು ಕುಮಾರಸ್ವಾಮಿ ಬೆಜ್ಜಿಹಳ್ಳಿ ವಿಷಯ ಮಂಡಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT