ಬೆಂಗಳೂರು: ಸಾಲ ತೀರಿಸುವ ಸಲುವಾಗಿ ನೆರೆಮನೆಗೆ ನುಗ್ಗಿ, ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿ ಗಣೇಶ್ (26) ಎಂಬಾತನನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೋಳಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಆರೋಪಿ ಅದರಿಂದ ನಷ್ಟ ಅನುಭವಿಸಿದ್ದ. ₹1 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದ. ಸಾಲಗಾರರು ಹಣ ಹಿಂತಿರುಗಿಸುವಂತೆ ಪೀಡಿಸುತ್ತಿದ್ದರು. ಹೀಗಾಗಿ ಕಳ್ಳತನ ಮಾಡಲು ನಿರ್ಧರಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘62 ವರ್ಷ ವಯಸ್ಸಿನ ಶಾಂತಮ್ಮ ಎಂಬುವರು ಮಾರಪ್ಪ ಗಾರ್ಡನ್ನ 4ನೇ ತಿರುವಿನಲ್ಲಿ ವಾಸವಿದ್ದಾರೆ. ಅವರ ಮನೆಯ ಪಕ್ಕದಲ್ಲೇ ಆರೋಪಿಯ ಅಜ್ಜಿಯೂ ನೆಲೆಸಿದ್ದಾರೆ. ಅಜ್ಜಿ ಮನೆಗೆ ಬಂದಿದ್ದ ಆತ ಶಾಂತಮ್ಮನವರ ಕೊರಳಿನಲ್ಲಿ ಚಿನ್ನದ ಸರ ಇರುವುದನ್ನು ಗಮನಿಸಿದ್ದ. ಶಾಂತಮ್ಮ ಮಗ ಎಂದಿನಂತೆಯೇ ಕೆಲಸಕ್ಕೆ ಹೋಗಿದ್ದರು. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಆತ ಮನೆಗೆ ನುಗ್ಗಿ ವೃದ್ಧೆಯ ಕತ್ತು ಹಿಸುಕಿದ್ದ. ಅವರು ಪ್ರಜ್ಞೆ ತಪ್ಪಿದ ನಂತರ ಕೊರಳಿನಲ್ಲಿದ್ದ ಸರ ಕಿತ್ತುಕೊಂಡು ಪರಾರಿಯಾಗಿದ್ದ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.