ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಗಣರಾಜ್ಯೋತ್ಸವದ ಅಂಗವಾಗಿ ಜನವರಿ ತಿಂಗಳು ಪೂರ್ತಿ ತನ್ನ ಪ್ರಕಟಣೆಗಳ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿದೆ.

ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಂಪುಟ ಮಾಲೆಯ 49 ಸಂಪುಟಗಳು, ಕನಕದಾಸ (ನಾಟಕ), ಕನಕದಾಸರ ಕೃತಿಗಳ ಭಾಷೆ ಮತ್ತು ಶೈಲಿ, ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ಕನಕದಾಸರ ಕೃತಿಗಳ ಅಧ್ಯಯನ, ಕನಕದಾಸರ ಕೃತಿಗಳ ಮಧ್ಯಕಾಲೀನ ಚರಿತ್ರೆಯ ಪುನಾರಚನೆ, ಗೋಪಾಳ ಗ್ಯಾನ, ಕನಕದಾಸರ ಕುರಿತ ನಾಟಕಗಳಲ್ಲಿ ಸಾಂಸ್ಕೃತಿಕ ಚಲನಶೀಲತೆ, ಇಪ್ಪತ್ತನೇ ಶತಮಾನ ಕಂಡ ಕನಕದಾಸರು, ಕನ್ನಡದ ಆನುಭಾವಿಕ ನೆಲೆ ಮತ್ತು ಕನಕದಾಸರು ಹಾಗೂ ಸಂತಕವಿ ಕನಕದಾಸರ ಜೀವನ ಚರಿತ್ರೆಯ ಬಗೆಗೆ ಹಿಂದಿ, ತಮಿಳು, ತೆಲಗು, ಬಂಗಾಳಿ, ಮಲೆಯಾಳ, ಮರಾಠಿ, ಅಸ್ಸಾಂ, ಪಂಜಾಬ ಭಾಷೆಗಳಿಗೆ ಅನುವಾದಗೊಂಡ ಪುಸ್ತಕಗಳು ಮಾರಾಟಕ್ಕೆ ಲಭ್ಯವಿವೆ.

ಆಸಕ್ತರು ಕನ್ನಡ ಭವನದ ಆವರಣದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆಗೆ ಅಥವಾ ಕಲಾಗ್ರಾಮದಲ್ಲಿರುವ ಅಧ್ಯಯನ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಪುಸ್ತಕಗಳನ್ನು ಖರೀದಿಸಬಹುದು. ಅಧ್ಯಯನ ಕೇಂದ್ರದ ದೂರವಾಣಿ ಸಂಖ್ಯೆ 080-22113147 ಅಥವಾ 7338640080ಕ್ಕೆ ಕರೆ ಮಾಡಿ, ಅಂಚೆಯ ಮೂಲಕವೂ ಪುಸ್ತಕಗಳನ್ನು ಖರೀದಿಸಲು ಅವಕಾಶವಿದೆ. ಅಂಚೆ ವೆಚ್ಚ ಪ್ರತ್ಯೇಕವಾಗಿ ಪಾವತಿಸಬೇಕಿದ್ದು, ಆನ್ಲೈನ್ ವೇದಿಕೆಗಳ ಮೂಲಕವು ಹಣ ಪಾವತಿಸಬಹುದು ಎಂದು ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.