ಬೆಂಗಳೂರು: ನಿರಾತಂಕ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ 9ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ ನಡೆಯಿತು.

ಸಮ್ಮೇಳನದಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಮಾನವ ಸಂಪನ್ಮೂಲ ವೃತ್ತಿನಿರತರು, ‘ಮಾನವ ಸಂಪನ್ಮೂಲ ಮತ್ತು ಕೈಗಾರಿಕಾ ಸಂಬಂಧಗಳಲ್ಲಿ ಮೌಲ್ಯಗಳು, ನವೀನತೆ ಹಾಗೂ ಕೃತಕ ಬುದ್ಧಿಮತ್ತೆಯ ಸಮ್ಮಿಲನ’ ವಿಷಯದ ಬಗ್ಗೆ ಚರ್ಚಿಸಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಹೈಕೋರ್ಟ್ನ ಹಿರಿಯ ವಕೀಲ ಎಸ್.ಎನ್. ಮೂರ್ತಿ, ವಿಜಯ ಟೈಮ್ಸ್ನ ಮುಖ್ಯ ಸಂಪಾದಕಿ ವಿಜಯಲಕ್ಷ್ಮಿ ಶಿಬರೂರು, ಟಿವಿಆರ್ಎಲ್ಎಸ್ ಸಂಸ್ಥೆಯ ಮುಖ್ಯಸ್ಥ ಪ್ರೊ.ಟಿ.ವಿ. ರಾವ್, ಸಮ್ಮೇಳನದ ಸಂಸ್ಥಾಪನಾ ಸಮಿತಿಯ ಸದಸ್ಯರಾದ ರಮೇಶ ಎಂ.ಎಚ್., ಶೇಖರ್ ಜಿ.ಎನ್., ಪ್ರಕಾಶ್ ಆರ್.ಎಂ., ಜಯರಾಮ್ ರಾಮಯ್ಯ ಪಾಲ್ಗೊಂಡಿದ್ದರು.

ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಅಗಾಧ ಸಾಧನೆಗೈದ ಆದಿತ್ಯ ಬಿರ್ಲಾ ಲೈಫ್ ಸ್ಟೈಲ್ ಬ್ರಾಂಡ್ಸ್ ಲಿಮಿಟೆಡ್ನ ಉಪಾಧ್ಯಕ್ಷೆ ಕಲ್ಪನಾ ಬಿ.ಜಿ., ಸಂಸೆರಾ ಎಂಜಿನಿಯರಿಂಗ್ ಲಿಮಿಟೆಡ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಧುಕರ್ ಭಟ್, ಐಟಿಸಿ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಸಂಜಯ್ ಮಿತ್ರ, ಪರಿಮಳ ಕನ್ಸಲ್ಟೆಂಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಗುರುರಾಜ ರಾವ್, ಬಾಷ್ ಲಿಮಿಟೆಡ್ನ ನಿವೃತ್ತ ಮಾನವ ಸಂಪನ್ಮೂಲ ವ್ಯವಸ್ಥಾಪಕ ಶಿನಪ್ಪಗೌಡ ಎಂ. ಮತ್ತು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ನಾಗರಾಜ ಜಿ. ಅವರಿಗೆ ‘ಮಾನವ ಸಂಪನ್ಮೂಲ ಕ್ಷೇತ್ರದ ಹಿರಿಯ ಸಾಧಕ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಇಂಡೊ-ಎಂಐಎಂ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ ಗ್ರೂಪ್ ಲೀಡರ್ ಸಂತೋಷ್ ಜೆ.ಪಿ., ಜೆ.ಎಸ್.ಡಬ್ಲ್ಯುನ ಎಚ್.ಆರ್.ಬಿ.ಪಿ. ವ್ಯವಸ್ಥಾಪಕ ದೇವರಾಜು ಎಚ್.ಎಸ್. ಮತ್ತು ಕಾರ್ಲ್ ಝೈಸ್ ಇಂಡಿಯಾ (ಬೆಂಗಳೂರು) ಪ್ರೈವೇಟ್ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ (ಔದ್ಯೋಗಿಕ ಸಂಬಂಧಗಳು) ಮುಖ್ಯಸ್ಥ ಪ್ರಿಯಾಂಕ್ ಎಚ್.ಎಸ್. ಅವರಿಗೆ ‘ಮಾನವ ಸಂಪನ್ಮೂಲ ಕ್ಷೇತ್ರದ ಯುವ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಹಾಸ್ಯ ಕಲಾವಿದರಾದ ಬಸವರಾಜು ಮತ್ತು ಮಲ್ಲಿಕಾ ಕುಲಾಲ್ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.