ಬೆಂಗಳೂರು: ಕನ್ನಡ ಸಾಹಿತ್ಯದ ಸಂಶೋಧನೆ ಮಾಡುವ ಬದಲು ಹಣ ಪಡೆದು ಪಿಎಚ್.ಡಿ ಪ್ರಬಂಧ ಬರೆದುಕೊಡುವ ಚಟುವಟಿಕೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ ಎಂದು ಸಾಹಿತಿ ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಭಾನುವಾರ ಆಯೋಜಿಸಿದ್ದ ಪಂಪೋತ್ಸವದಲ್ಲಿ ಎಂ.ತಿಮ್ಮಯ್ಯ ಅವರ ‘ನಿಚ್ಚಂ ಪೊಸತು’, ‘ಸರ್ವಕಾಲಕ್ಕೂ ಪಂಪ’ ಪುಸ್ತಕಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ಮಾಡಬಯಸುವವರು ನೋಂದಣಿ ಮಾಡಿಸುವುದರಿಂದ ಮೊದಲ್ಗೊಂಡು ಪ್ರಬಂಧ ಸಲ್ಲಿಸುವವರೆಗೂ ₹2 ಲಕ್ಷದಿಂದ ₹5 ಲಕ್ಷವನ್ನು ಮಾರ್ಗದರ್ಶಕರಿಗೆ ಕೊಡಬೇಕಾದ ವಾತಾವರಣ ನಿರ್ಮಿಸಲಾಗಿದೆ. ಹಣ ಪಡೆದ ನಂತರ ಪ್ರಬಂಧವನ್ನು ಹೇಗೆ ನೀಡಿದರೂ ಅದನ್ನು ಪಿಎಚ್.ಡಿ ಪದವಿಗೆ ಪರಿಗಣಿಸಲಾಗುತ್ತಿದೆ. ಕನ್ನಡದಲ್ಲಿ ಪಿಎಚ್.ಡಿ ಪಡೆಯುವುದಕ್ಕೆ ಗೌರವವೇ ಇಲ್ಲದಂತಾಗಿದೆ ಎಂದು ಬೇಸರಿಸಿದರು.

ಕನ್ನಡದ ಬೆಳವಣಿಗೆ ತಡೆಯುವಲ್ಲಿ ಕೆಲವು ಅಧ್ಯಾಪಕರ ಪಾತ್ರವೂ ಇದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದಲ್ಲಿ ಕನ್ನಡದ ಪ್ರಾಧ್ಯಾಪಕರು ಚೆನ್ನಾಗಿ ಆಧ್ಯಯನ ಮಾಡಿಕೊಂಡು ಬಂದು ಪಾಠ ಮಾಡುತ್ತಿಲ್ಲ. ಕಡ್ಡಾಯವಾಗಿ ಆರು ತಿಂಗಳ ಕಾಲ ಕನ್ನಡದ ಅಧ್ಯಾಪಕರಿಗೆ ಆರಂಭದಲ್ಲಿ ಪಂಪನ ಸಾಹಿತ್ಯ ಸಹಿತ ಹಳಗನ್ನಡ ಸಾಹಿತ್ಯ ಓದುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಮರ್ಶಕ ಹನೂರು ಕೃಷ್ಣಮೂರ್ತಿ ಮಾತನಾಡಿ, ‘ಹಳಗನ್ನಡ ಜತೆಗೆ ವಚನ ಸಾಹಿತ್ಯದ ಕುರಿತು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಅಧ್ಯಾಪಕರು ಅಧ್ಯಯನ ಮಾಡುವ ಜತೆಗೆ ಬೋಧನೆಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಈಗಲೂ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಎಂದರೆ ಕಷ್ಟ. ಅದರಲ್ಲೂ ಹಳಗನ್ನಡ ಓದುವುದು ಅಸಾಧ್ಯ ಎನ್ನುವ ಅಭಿಪ್ರಾಯವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಗಿದೆ. ಕನ್ನಡದ ವಿದ್ವಾಂಸರನ್ನು ಆಹ್ವಾನಿಸಿ ಪಠ್ಯಕ್ರಮಗಳಿಗೆ ಪೂರಕವಾಗಿ ಹಳಗನ್ನಡದ ಕಾವ್ಯ, ಕಾವ್ಯಮೀಮಾಂಸೆ, ಛಂದಸ್ಸು ಕುರಿತು ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದರು.

ಹಿರಿಯ ಸಂಶೋಧಕ ಹಂಪ ನಾಗರಾಜಯ್ಯ ಮಾತನಾಡಿ, ‘ಪಂಪ ಬದುಕಿರುವಾಗಲೇ ಉನ್ನತ ಸ್ಥಾನವನ್ನು ಪಡೆದ ಕವಿ. ಇತ್ತೀಚಿನ ವರ್ಷಗಳಲ್ಲಿ ಕುವೆಂಪು ಅವರಿಗೆ ಇಂತಹ ಗೌರವ ಸಿಕ್ಕಿತ್ತು. ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲಿ ಪಂಪನಿಗೆ ಅಗ್ರ ಸ್ಥಾನ, ಪಂಪನ ಕಾವ್ಯದ ಓದು ನಿರಂತರವಾಗಿರಲಿ’ ಎಂದು ಹೇಳಿದರು.

ವಿಮರ್ಶಕಿ ಎಂ.ಎಸ್.ಆಶಾದೇವಿ, ಪ್ರೊ.ಜಯಪ್ರಕಾಶ ಶೆಟ್ಟಿ, ಲೇಖಕಿಯರಾದ ಹಾ.ವೀ.ಮಂಜುಳಾ ಶಿವಾನಂದ, ಶಾಂತಲಾ ಸುರೇಶ ಉಪಸ್ಥಿತರಿದ್ದರು.

ವಿಚಾರ ಗೋಷ್ಠಿಯಲ್ಲಿ ಪಂಪನ ಸಾಹಿತ್ಯ ಕುರಿತು ಕೆ.ವೈ.ನಾರಾಯಣಸ್ವಾಮಿ ಉಪನ್ಯಾಸ ನೀಡಿದರು. ಬಸವರಾಜ ಕಲ್ಗುಡಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಅಧ್ಯಾಪಕರಾಗಿ ನೇಮಕವಾದವರು ಕಡ್ಡಾಯವಾಗಿ ಆರು ತಿಂಗಳು ಪಂಪನ ಬಗ್ಗೆ ಓದಬೇಕು. ಇದರಿಂದ ಹೊಸ ಪೀಳಿಗೆ ಹಳಗನ್ನಡ ಅರಿಯಲು ಸಹಕಾರಿಯಾಗಲಿದೆ.
– ಡಾ. ಓ.ಎಲ್.ನಾಗಭೂಷಣಸ್ವಾಮಿ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.