ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರ ಆಡಳಿತ ವೈಖರಿ ವಿರೋಧಿಸಿ ಕಸಾಪ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನೇ.ಭ. ರಾಮಲಿಂಗ ಶೆಟ್ಟಿ ರಾಜೀನಾಮೆ ನೀಡಿದ್ದಾರೆ.

ಗೌರವ ಕಾರ್ಯದರ್ಶಿಯಾಗಿದ್ದ ಪದ್ಮಿನಿ ನಾಗರಾಜು ಅವರು ಕಳೆದ ವಾರ ರಾಜೀನಾಮೆ ನೀಡಿದ್ದರು. ಮತ್ತೊಬ್ಬ ಗೌರವ ಕಾರ್ಯದರ್ಶಿ ರಾಮಲಿಂಗ ಶೆಟ್ಟಿ ಅವರೂ ಈಗ ರಾಜೀನಾಮೆ ನೀಡಿದ್ದಾರೆ. ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ಮಹೇಶ ಜೋಶಿ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗೌರವ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡಾಗಿನಿಂದ ವಿನಾಕಾರಣ ನಿಂದನೆ, ಬೆದರಿಕೆ ಎದುರಿಸಿದ್ದೇನೆ. ದರ್ಪ, ದೌರ್ಜನ್ಯದ ನಡೆಯಿಂದ ಹಲವು ಬಾರಿ ಹೊರ ಹೋಗಲು ಬಯಸಿದ್ದೆ. ಪದಾಧಿಕಾರಿಗಳ ಸಾಂತ್ವನ, ಕಸಾಪದ ಮೇಲಿನ ಅಭಿಮಾನದಿಂದ ಮುಂದುವರಿದಿದ್ದೆ’ ಎಂದು ತಿಳಿಸಿದ್ದಾರೆ.

‘ಮಹೇಶ ಜೋಶಿ ಅವರ ಜತೆಗೆ ಕೆಲಸ ಮಾಡಿದ್ದು ಕಹಿ ಘಟನೆಯೂ ಹೌದು. ಅವರಿಗೆ ದುರಹಂಕಾರವಿದ್ದು, ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.