ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2022: ಬೆಂಗಳೂರಿಗೆ ಏನೇನು?

Last Updated 4 ಮಾರ್ಚ್ 2022, 8:22 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಸುಗಮ ಸಂಚಾರ, ಹಸಿರು ಬೆಂಗಳೂರು ಹಾಗೂ ನಾಗರಿಕ ಸೇವೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆ, ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬಜೆಟ್‌ ಭಾಷಣದಲ್ಲಿ ಘೋಷಿಸಿದರು.

ಸಮಗ್ರ ಅಭಿವೃದ್ಧಿ:

* ಅಮೃತ್‌ ನಗರೋತ್ಥಾನ ಯೋಜನೆ: ನಗರದ ಮೂಲಭೂತ ಸೌಕರ್ಯಕ್ಕಾಗಿ 3 ವರ್ಷಗಳಲ್ಲಿ ₹6,000 ಕೋಟಿ.

* ಸ್ಮಾರ್ಟ್‌ ಸಿಟಿ ನಿರ್ಮಾಣ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಬಾಕಿ ಇರುವ 1,297 ಎಕರೆ ಭೂಸ್ವಾಧೀನ.

* ಹಳೆಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ಉನ್ನತೀಕರಣಕ್ಕಾಗಿ ₹1,500 ಕೋಟಿ.

* ₹312 ಕೋಟಿ ವೆಚ್ಚದ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾಮಗಾರಿ 2022–23ನೇ ಸಾಲಿನಲ್ಲಿ ಮುಕ್ತಾಯ.

* ಕೆ–100 ಸಿಟಿಜನ್‌ ವಾಟರ್‌ ವೇ ಯೋಜನೆ: ಕೆ.ಆರ್‌.ಮಾರುಕಟ್ಟೆ ಜಂಕ್ಷನ್‌ ನಿಂದ ಬೆಳ್ಳಂದೂರು ಕೆರೆಯ ವರೆಗೆ ಕೋರಮಂಗಳ ರಾಜಕಾಲುವೆಯ ಅಭಿವೃದ್ಧಿಗೆ ₹195 ಕೋಟಿ.

* ಅಮೃತ್‌ ನಗರೋತ್ಥಾನ ಯೋಜನೆ: ಬೃಹತ್‌ ಮಳೆನೀರುಗಾಲುವೆ ಹಾಗೂ ರಾಜಕಾಲುವೆ ಅಭಿವೃದ್ಧಿಗೆ ₹1,500 ಕೋಟಿ.

ಸುಗಮ ಸಂಚಾರ:

* ₹11,250 ಕೋಟಿ ವೆಚ್ಚದ ನಮ್ಮ ಮೆಟ್ರೊ ಹಂತ–3 ಯೋಜನೆ ಜಾರಿಗೆ ಕೇಂದ್ರಕ್ಕೆ ಡಿ.ಪಿ.ಆರ್‌ ಸಲ್ಲಿಕೆ.

* ₹15,000 ಕೋಟಿ ವೆಚ್ಚದಲ್ಲಿ 37 ಕಿ.ಮೀ. ಉದ್ದದ ಹೊಸ ಮೆಟ್ರೊ ಮಾರ್ಗಕ್ಕೆ ಡಿಪಿಆರ್‌ ತಯಾರಿಸಲು ಕ್ರಮ.

* ರೈಲ್ವೆ ನಿಲ್ದಾಣಗಳಲ್ಲಿ ಮೆಟ್ರೊ ನಿಲ್ದಾಣದ ಸಂಪರ್ಕ ಕಾಮಗಾರಿಗೆ ₹55 ಕೋಟಿ: ವೈಟ್‌ಫೀಲ್ಡ್‌, ಕೆ.ಆರ್‌.ಪುರಂ, ಬೈಯಪ್ಪನಹಳ್ಳಿ, ಯಶವಂತಪುರ, ಜ್ಞಾನಭಾರತಿ ಮತ್ತು ಯಲಹಂಕ.

* ₹45 ಕೋಟಿ ವೆಚ್ಚದಲ್ಲಿ ಬನಶಂಕರಿ ಜಂಕ್ಷನ್‌ನಲ್ಲಿ ಸ್ಕೈವಾಕ್‌ ನಿರ್ಮಾಣ.

* 73 ಕಿ.ಮೀ. ಉದ್ದದ ಫೆರಿಫರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ₹21,091 ಕೋಟಿ.

* ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಿಗ್ನಲ್‌ ಮುಕ್ತ ವಾಹನ ಸಂಚಾರಕ್ಕೆ ಬಿಬಿಎಂಪಿ, ಬಿಡಿಎ ಮತ್ತು ಎನ್‌ಎಚ್ಎಐ ವತಿಯಿಂದ ಗ್ರೇಡ್‌ ಸೆಪರೇಟರ್‌ ಮತ್ತು ಮೇಲು ಸೇತುವೆ ಕಾಮಗಾರಿ.

* ಬೆಂಗಳೂರು ಉಪನಗರ ರೈಲ್ವೆ ಯೋಜನೆ; ₹15,267 ಕೋಟಿ: ಶೀಘ್ರದಲ್ಲೇ ಚಿಕ್ಕವಾಣಾವರ–ಬೈಯಪ್ಪನಹಳ್ಳಿ ಕಾರಿಡಾರ್ ಕಾಮಗಾರಿ.

ಹಸಿರು ಬೆಂಗಳೂರು

* ಎನ್‌ಜಿಇಎಫ್‌ನ 105 ಎಕರೆ ಪ್ರದೇಶದಲ್ಲಿ ಸಿಂಗಪುರ ಮಾದರಿಯಲ್ಲಿ ಗ್ರೀನ್‌ ಎಕ್ಸ್‌ಪೊ ನಿರ್ಮಾಣ.

* ಯಲಹಂಕ ಬಳಿಯ ಜಾರಕಬಂಡೆ ಕಾವಲ್‌ನಲ್ಲಿ 350 ಎಕರೆ ವಿಸ್ತೀರ್ಣದ ಅಟಲ್‌ ಬಿಹಾರಿ ವಾಜಪೇಯಿ ಉದ್ಯಾನವನ ಅಭಿವೃದ್ಧಿ.

ನಾಗರಿಕ ಸೇವೆಗಳು

* ಬಿಬಿಎಂಪಿ ವ್ಯಾಪ್ತಿಯಲ್ಲಿ 'ಬಿ ವಹಿಯಲ್ಲಿ' ದಾಖಲಿಸಿರುವ 6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳನ್ನು 'ಎ ವಹಿಗೆ' ದಾಖಲಿಸಲು ಕಾನೂನು ಕ್ರಮ.

* ನಗರದ ನಾಲ್ಕು ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ.

* ಅಸಾಂಕ್ರಾಮಿಕ ರೋಗಗಳ ತಪಾಸಣೆಗಾಗಿ ನಗರದ ಎಲ್ಲ ವಾರ್ಡ್‌ಗಳಲ್ಲಿ 'ನಮ್ಮ ಕ್ಲಿನಿಕ್‌' ಸ್ಥಾಪನೆ.

* 20 ಶಾಲೆಗಳನ್ನು ₹89 ಕೋಟಿಗಳಲ್ಲಿ ಉನ್ನತೀಕರಿಸಿ, ಬೆಂಗಳೂರು ಪಬ್ಲಿಕ್‌ ಶಾಲೆಗಳ ಅಭಿವೃದ್ಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT