ಬುಧವಾರ, ಸೆಪ್ಟೆಂಬರ್ 22, 2021
21 °C

ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ: ರಾಜಭವನ ಸುತ್ತಮುತ್ತ ವಾಹನಗಳ ದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ರಾಜಭವನದಲ್ಲಿ ತಯಾರಿ ನಡೆಸಲಾಗುತ್ತಿದ್ದು, ಮಧ್ಯಾಹ್ನದಿಂದಲೇ ರಾಜಭವನ ರಸ್ತೆಯಲ್ಲಿ ವಾಹನಗಳ ಓಡಾಟ ಭಾಗಶಃ ಬಂದ್ ಮಾಡಲಾಗಿದೆ. ಇದರಿಂದ ವಿಪರೀತ ದಟ್ಟಣೆ ಉಂಟಾಗುತ್ತದೆ.

ಇಂದು ಸಂಜೆ ಕಾರ್ಯಕ್ರಮವಿದ್ದು, ಬೆಳಿಗ್ಗೆಯಿಂದಲೇ ಪೊಲೀಸರು ರಾಜಭವನ ಸುತ್ತ ಭದ್ರತೆ ಒದಗಿಸಿದ್ದಾರೆ. ಮಾರ್ಗಗಳ ಬದಲಾವಣೆ ಸಹ ಮಾಡುತ್ತಿದ್ದಾರೆ.

ರಾಜಭವನ ಎದುರಿನ ಮುಖ್ಯರಸ್ತೆ, ವಿಧಾನಸೌಧ ಎದುರಿನ ರಸ್ತೆ, ಕಬ್ಬನ ಪಾರ್ಕ್ ರಸ್ತೆ, ಮಿನ್ಸ್ಕ್ ಚೌಕ್ ಹಾಗೂ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿವೆ‌.

ವಾಹನಗಳ ಸಂಚಾರ ತೀರಾ ನಿಧಾನಗತಿಯಲ್ಲಿದ್ದು, ಎರಡು ಆಂಬುಲೆನ್ಸ್‌ಗಳು ಸಹ ದಟ್ಟಣೆಯಲ್ಲಿ ಸಿಲುಕಿಕೊಂಡಿವೆ. ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು