ಬೆಂಗಳೂರು: ವೈವಿಧ್ಯಮಯ ತಿಂಡಿಗಳ ಘಮ, ರುಚಿಯು ಬಾಯಲ್ಲಿ ನೀರೂರುವಂತೆ ಮಾಡಿತು. ಚಿಟಿಕೆಯಷ್ಟು ಬಾಯಿಗೆ ಹಾಕಿಕೊಂಡು ರುಚಿ ಸವಿದು ನೋಡುಗರು ಸಂಭ್ರಮಿಸಿದರು.

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಭಾನುವಾರ ನಡೆದ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆಯ ಝಲಕ್ ಇದು.

ಮನೆಯಲ್ಲೇ ಸಿದ್ಧಪಡಿಸಿಕೊಂಡು ತಂದಿದ್ದ ಖಾದ್ಯಗಳನ್ನು ಸ್ಪರ್ಧಿಗಳು ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದರು. ಖಾದ್ಯವನ್ನು ಹೂವು, ಗೊಂಬೆ ಹಾಗೂ ಕಲಾಕೃತಿಗಳನ್ನು ಇಟ್ಟು ಆಕರ್ಷಕವಾಗಿ ಅಲಂಕರಿಸಿದ್ದರು. ಪ್ರತಿಯೊಬ್ಬರ ಬಳಿಗೂ ಹೋದ ತೀರ್ಪುಗಾರರಾದ ‘ಒಗ್ಗರಣೆ ಡಬ್ಬಿ’ ಮುರಳಿ ಮತ್ತು ನಿರೂಪಕಿ ಸುಚಿತ್ರಾ ಪ್ರತಿ ತಿನಿಸುಗಳ ರುಚಿ ಸವಿದು ಮೌಲ್ಯಮಾಪನ ಮಾಡಿದರು.

ಉದ್ದಿನ ಉಂಡೆ, ಅಂಟಿನ ಉಂಡೆ, ಎಳ್ಳುಪುಡಿ, ಕರಕಳವಿ (ಸಿಹಿ), ಚೋಳದ ರೊಟ್ಟಿ, ಪೂರಿ ಸಾಗ್, ಎಲ್ಲ ಹಿಟ್ಟುಗಳ ಮಿಶ್ರಣದ ಮಸಾಲ ರೊಟ್ಟಿ, ಬಿಳಿ ಹೋಳಿಗೆ, ಬದನೆಕಾಯಿ ಪಲ್ಯ, ಗೋಧಿ ಪುಟ್ಟು, ಅವಲಕ್ಕಿ, ಅಕ್ಕಿವಡೆ, ಪುಂಡಿಪಲ್ಯ, ಅವಲಕ್ಕಿ ಪುಲಾವ್, ಮಲ್ನಾಡ್ ಗೀರೈಸ್, ಸಿಹಿ ಹೋಳಿಗೆ, ಖಾರದ ಹೋಳಿಗೆ, ಮಾದ್ಲಿ, ಬ್ರೌನ್ ಚನ್ನಾ, ಹಾಲುಬಾಯಿ (ರಾಗಿ ಹಲ್ವಾ), ರಾಗಿ ಡೆಸಾರ್ಟ್, ಹಲಸಂದೆ ವಡಾ, ಮಂಡಕ್ಕಿ ಒಗ್ಗರಣೆ, ಮೋದಕ, ವೀಳ್ಯದೆಲೆ ರಸಂ, ಸ್ವೀಟ್ ಸಮೋಸ, ಸ್ವೀಟ್ ಪಪ್ಪಡಿ ಚಾಟ್, ಕ್ಯಾರೆಟ್ ಹಲ್ವಾ, ಹಾಗಲಕಾಯಿ ಚಿತ್ರಾನ್ನ, ಸಬ್ಬಕ್ಕಿ ಕೀರ್, ಅಕ್ಕಿ ಪಾಯಸ, ತರಕಾರಿ ಪಾಯಸ, ಮೆಂತ್ಯೆ ಕಡುಬು, ಉಂಡ್ಲುಗಾಯಿ ಕಡುಬು, ಕೊಟ್ಟೆ ಕಡುಬು, ಚೊಲ್ಲುಕಡುಬು, ಸಿಹಿಗೆಣಸು ಒತ್ತು ಶಾವಿಗೆ, ಅಕ್ಕಿ ಶಾವಿಗೆ, ರಾಗಿ ಶಾವಿಗೆ, ಶೇಂಗಾ ಚಟ್ನಿ, ಈರುಳ್ಳಿ ಚಟ್ನಿ, ಟೊಮೆಟೊ ಕಾಯಿ ಚಟ್ನಿ, ಮೆಣಸಿನ ಕಾಯಿ ಚಟ್ನಿ, ಹುಣಸೆಕಾಯಿ ಚಟ್ನಿ, ತೆಂಗಿನಕಾಯಿ ಚಟ್ನಿ, ಹುಚ್ಚೆಳ್ಳು ಪುಡಿ, ಕುಚಲಕ್ಕಿ ಕೋಡುಬಳೆ ಹೀಗೆ ನಾನಾ ತರಹದ ತಿಂಡಿಗಳು ಬಾಯಲ್ಲಿ ನೀರೂರಿಸಿದವು.

78 ವರ್ಷದ ಅಜ್ಜಿ ಬಿ.ಆರ್. ಗೌರಮ್ಮ ಅವರು ಖಾರದ ಕಡುಬು, 19 ವರ್ಷದ ಶ್ರೇಯಾ ರವೆ ಕೋಡುಬಳೆ ತಂದಿದ್ದರು. ಸ್ಪರ್ಧೆಯಲ್ಲಿದ್ದ ಹಳೆ ಬೇರು ಹೊಸ ಚಿಗುರುಗಳಿಗೆ ಸಾಕ್ಷಿಗಳಂತೆ ಇವರಿಬ್ಬರು ಕಂಡರು.

ಚಿಕನ್ ಉಪ್ಪಿನಕಾಯಿ ಕುತೂಹಲಕ್ಕೆ ಕಾರಣವಾಯಿತು. ತಿರ್ಪುಗಾರರು ಪರೀಕ್ಷಿಸಿ ಅತ್ತ ಹೋದ ಕೂಡಲೇ ನೀರುದೋಸೆ–ಚಿಕನ್ ಸುಕ್ಕ ಖಾಲಿಯಾಯಿತು. ಚಿಕನ್ ಗ್ರೇವಿ, ದೊನ್ನೆ ಬಿರಿಯಾನಿ, ಚಿಕನ್ ಕೈಮಾ, ಚಿಕನ್ ಪಕೋಡ, ಗಂಗಮ್ಮ ಬಿರಿಯಾನಿ, ಕೋಳಿ ರವಾ ಬಾತ್, ಶಾದಿಕಾ ಬಿರಿಯಾನಿ ರುಚಿ ನೋಡುವವರ ಸಂಖ್ಯೆ ಹೆಚ್ಚಾಗಿತ್ತು.

ಒಂದೊಂದೇ ಆಹಾರದ ಸಾಂಪ್ರದಾಯಿಕ ಹಿನ್ನೆಲೆ, ಆರೋಗ್ಯಕ್ಕೆ ಹೇಗೆ ಒಳ್ಳೆಯದು? ಅದನ್ನು ಹೇಗೆ ಮಾಡುವುದು ಎಂಬ ವಿವರಗಳನ್ನು ‘ಒಗ್ಗರಣೆ ಡಬ್ಬಿ’ ಮುರಳಿ ನೀಡುತ್ತಿರುವಾಗ ಅದಕ್ಕೆ ಸಂಬಂಧಪಟ್ಟ ಸ್ಪರ್ಧಿಗಳ ಮುಖದಲ್ಲಿ ಸಂತೋಷದ ನಗು ಅರಳಿತು.

‘ನನ್ನ ಮನೆಯಲ್ಲಿ ಸೇವಿಸಿದ ಆಹಾರವನ್ನು ಹೊರತುಪಡಿಸಿ ಇಲ್ಲಿವರೆಗೆ 18 ಸಾವಿರಕ್ಕೂ ಅಧಿಕ ವೈವಿಧ್ಯ ತಿನಿಸುಗಳನ್ನು ಸೇವಿಸಿದ್ದೇನೆ. ಹಾಗಾಗಿ ಯಾವುದೇ ಆಹಾರವನ್ನು ಒಂದು ಚಮಚದಷ್ಟು ಬಾಯಿಗೆ ಹಾಕಿಕೊಂಡರೆ ಇದರಲ್ಲೇನಿದೆ ಎಂಬುದು ಗೊತ್ತಾಗಿ ಬಿಡುತ್ತದೆ. ಇಲ್ಲಿ ಎಲ್ಲರೂ ಸಾಂಪ್ರದಾಯಿಕ ಪದ್ಧತಿಯನ್ನು ಇಟ್ಟುಕೊಂಡೇ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ’ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.

‘ಎಲ್ಲರೂ ರುಚಿಕಟ್ಟಾದ ಅಡುಗೆಗಳನ್ನು ತಯಾರಿಸಿ ತಂದಿದ್ದಾರೆ. ಒಂದಕ್ಕಿಂತ ಒಂದು ಮಿಗಿಲು ಎಂಬಂತೆ ಸವಿಯಾಗಿವೆ’ ಎಂದು ನಿರೂಪಕಿ ಸುಚಿತ್ರಾ ಅವರು ಹೊಗಳಿದರು.

ಸ್ಪರ್ಧೆಯಲ್ಲಿ ಇಬ್ಬರಷ್ಟೇ ಪುರುಷರು. ಉಳಿದವರೆಲ್ಲ ಮಹಿಳೆಯರು. ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ‘ಒಗ್ಗರಣೆ ಡಬ್ಬಿ’ ಮುರಳಿ ಮತ್ತು ನಿರೂಪಕಿ ಸುಚಿತ್ರಾ ಅಡುಗೆಯ ಪ್ರಾತ್ಯಕ್ಷಿಕೆ ನೀಡಿದರು. ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ಬ್ರ್ಯಾಂಡ್ ಮ್ಯಾನೇಜರ್ ಹರ್ಷ್ ರತ್ತೋಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.