ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಬಿಕ್ಕಟ್ಟು: ಶಾಸಕರು, ಸಂಸದರು ಒಗ್ಗಟ್ಟಾಗಿ ನಿಲ್ಲಲಿ‌– ಅನಂತನಾಗ್‌

Published 21 ಸೆಪ್ಟೆಂಬರ್ 2023, 4:36 IST
Last Updated 21 ಸೆಪ್ಟೆಂಬರ್ 2023, 4:36 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯದ ಶಾಸಕರು, ಸಂಸದರು ಒಗ್ಗಟ್ಟಾಗಿ ನಿಂತುಕೊಳ್ಳಬೇಕು ಎಂದು ನಟ ಅನಂತನಾಗ್‌ ಆಗ್ರಹಿಸಿದ್ದಾರೆ. 

ಈ ಕುರಿತು ವಿಡಿಯೊವೊಂದರಲ್ಲಿ ಮಾತನಾಡಿರುವ ಅನಂತನಾಗ್‌, ‘ಮಳೆ ಕಡಿಮೆ ಇದ್ದ ಸಂದರ್ಭದಲ್ಲಿ ಎಂದಿನಂತೆ ತಮಿಳುನಾಡು ಕಾವೇರಿ ವಿವಾದ ಆರಂಭಿಸಿದೆ. ಇದನ್ನು ಸುಮಾರು 60 ವರ್ಷದಿಂದ ನೋಡಿಕೊಂಡು ಬಂದಿದ್ದೇವೆ. ಅಲ್ಲಿ ಅಧಿಕಾರಕ್ಕೆ ಬರುವುದು ಕೇವಲ ಡಿಎಂಕೆ ಸರ್ಕಾರಗಳೇ. ಕರ್ನಾಟಕ ಸರಿಯಾಗಿ ಕಾವೇರಿ ನೀರು ಬಿಡುತ್ತಿಲ್ಲ ಎನ್ನುವ ಭಾವನೆಯನ್ನು ಅಲ್ಲಿನ ಜನರಿಗೆ ಅವರು ತಂದಿದ್ದಾರೆ’ ಎಂದಿದ್ದಾರೆ. 

‘ಬ್ರಿಟಿಷರ ಕಾಲದಿಂದಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದೆ. ಬ್ರಿಟಿಷರು ತಮಿಳುನಾಡಿಗೆ ಹೆಚ್ಚು ನೀರು ಸಿಗುವಂತಹ ಅವ್ಯವಸ್ಥೆ ಮಾಡಿದ್ದರು. ಕಳೆದ ಅನೇಕ ವರ್ಷಗಳಲ್ಲಿ ಈ ವಿವಾದ ಹೆಚ್ಚಾಗುತ್ತಲೇ ಬಂದಿದೆ. ಕರ್ನಾಟಕ ಇದೀಗ ಕಠಿಣ ನಿಲುವು ತೆಗದುಕೊಳ್ಳಬೇಕಾಗಿದೆ. ಕರ್ನಾಟಕ ಎಂದರೆ ಪಾಕಿಸ್ತಾನ, ಶ್ರೀಲಂಕಾ ಅಂದುಕೊಂಡಿದ್ದಾರೆ. ಯುದ್ಧಕ್ಕೆ ನಿಂತುಕೊಂಡಂತೆ ಅವರ ನಡೆಯಿದೆ. ಮಾತುಕತೆಯಲ್ಲಿ ಬಗೆಹರಿಸಲು ಅವರಿಗೆ ಇಷ್ಟವಿಲ್ಲ. ಅವರೆಲ್ಲರೂ ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಹೋಗಿ ಕಾವೇರಿ ಸಮಸ್ಯೆಯನ್ನು ಪ್ರತಿನಿಧಿಸುತ್ತಾರೆ. ನಮ್ಮವರು ಅಷ್ಟೇ ಬಲದಿಂದ ಹೋಗಿ ಪ್ರತಿನಿಧಿಸಿದ್ದು ಕೇಳಿಬರುತ್ತಿಲ್ಲ. ಕಾವೇರಿ ನೀರು ಅವರಿಗೆ ಕುಡಿಯಲು ಅಲ್ಲ ಬದಲಾಗಿ ಕೈಗಾರಿಕೆಗಳಿಗೆ ಹಾಗೂ ಕೃಷಿಗೆ ಬಳಸುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿದೆ. ನಮ್ಮ ಎಲ್ಲ ಶಾಸಕರು, ಸಂಸದರು ಒಗ್ಗಟ್ಟಿನಿಂದ ನಿಂತುಕೊಂಡು ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಈ ಕುರಿತು ದಿಟ್ಟ ನಿಲುವು ತಾಳಬೇಕು’ ಎಂದು ಅನಂತನಾಗ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT