ಬೆಂಗಳೂರು: ಕೆಂಗೇರಿ ಉಪನಗರ ಬಡಾವಣೆಯಲ್ಲಿ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಮಾಲೀಕತ್ವವನ್ನು ಖಾಸಗಿಯವರ ಹೆಸರಿಗೆ ನೋಂದಾಯಿಸಿಕೊಂಡಿರುವ ಹಾಗೂ ಕೆಲವು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಭಾರಿ ಹಗರಣ ಬೆಳಕಿಗೆ ಬಂದಿದೆ.

1976ರಲ್ಲಿ ಬಿಡಿಎ ರಚನೆಯಾಗುವುದಕ್ಕೂ ಮುನ್ನ ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಅಸ್ತಿತ್ವದಲ್ಲಿತ್ತು. ಆಗಲೇ ಸಿಐಟಿಬಿ ಕೆಂಗೇರಿ ಉಪನಗರ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಆರಂಭಿಸಿತ್ತು. 1966ರಿಂದ 1979ರ ಅವಧಿಯಲ್ಲಿ ಈ ಬಡಾವಣೆಯ ನಿವೇಶನಗಳನ್ನು ಮಾರಾಟ ಮಾಡಿತ್ತು.

ಇಲ್ಲಿ ಹಂಚಿಕೆಯಾದ ಕೆಲವು ನಿವೇಶನಗಳ ಮಾಲೀಕರು ಬದಲಿ ನಿವೇಶನಗಳನ್ನು ಪಡೆದಿದ್ದರು. ಅವರು ಹಿಂತಿರುಗಿಸಿದ ನಿವೇಶನಗಳನ್ನು ಪ್ರಾಧಿಕಾರವು ಯಾರಿಗೂ ಹಂಚಿಕೆ ಮಾಡಿರಲಿಲ್ಲ. ಆದರೆ, ಇಂತಹ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಪ್ರಾಧಿಕಾರದ ಕಡತಗಳಲ್ಲೂ ಬೋಗಸ್ ದಾಖಲೆಗಳನ್ನು ರೂಪಿಸಲಾಗಿದೆ.

ಈ ಬಡಾವಣೆಯಲ್ಲಿ 1971 ಸಂಖ್ಯೆಯ 30x50 ಅಡಿ ವಿಸ್ತೀರ್ಣದ ನಿವೇಶನ ಖರೀದಿಸಿದ್ದ ಜೆ.ಅರುಣ್ ಕುಮಾರ್ ಶುದ್ಧ ಕ್ರಯಪತ್ರ ನೀಡುವಂತೆ ಪ್ರಾಧಿಕಾರಕ್ಕೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಅದರ ಮೂಲ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮದ ಶಂಕೆ ವ್ಯಕ್ತವಾಗಿತ್ತು. ಪ್ರಾಧಿಕಾರದ ಆಯುಕ್ತ ರಾಕೇಶ್ ಸಿಂಗ್ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ವಿಶೇಷ ಕಾರ್ಯಪಡೆಯ (ಎಸ್ಟಿಎಫ್) ಎಸ್.ಪಿ ಸಚಿನ್ ಬಿ.ಘೋರ್ಪಡೆ ಅವರಿಗೆ ಸೂಚಿಸಿದ್ದರು. ಅಕ್ರಮ ದಾಖಲೆ ಸೃಷ್ಟಿಸಿ ಭಾರಿವಂಚನೆ ನಡೆಸಿರುವುದುಎಸ್ಟಿಎಫ್ನ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ.

ಬಿಡಿಎ ದಾಖಲೆಯನ್ನೂ ತಿದ್ದಿದರು: ಈ ಬಡಾವಣೆಯ ನಿವೇಶನ ಹಂಚಿಕೆ ನೋಂದಣಿಯ ಕಡತಗಳನ್ನೂ ತಿದ್ದಲಾಗಿದೆ. ಅವುಗಳ ಕೈಬರಹಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳನ್ನು ಇತ್ತೀಚೆಗೆ ಬರೆದಿರುವುದು ಎಸ್ಟಿಎಫ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇಂತಹ ನಿವೇಶನಗಳ ಪಟ್ಟಿಗಳಿಗೆ ಸಂಬಂಧಿಸಿದ ಮೂಲ ಕಡತಗಳನ್ನು ಪರಿಶೀಲಿಸಿದಾಗ ನಿವೇಶನಕ್ಕಾಗಿ ಅಧಿಕೃತವಾಗಿ ಅರ್ಜಿಯನ್ನೇ ಸಲ್ಲಿಸದ ಹಾಗೂ ನಿವೇಶನ ಪಡೆಯಲು ಅರ್ಹತೆಯನ್ನೇ ಹೊಂದಿರದ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಪತ್ತೆಯಾಗಿದೆ.

ಅನುಮಾನವೇ ಬರುತ್ತಿರಲಿಲ್ಲ: ಅಕ್ರಮವೆಸಗಿರುವವರ ಜೊತೆ ಪ್ರಾಧಿಕಾರದ ದಾಖಲೆಗಳ ವಿಭಾಗದ ಒಬ್ಬ ಅಧಿಕಾರಿಯೂ ಶಾಮೀಲಾಗಿದ್ದಾರೆ. ಅವರು ನಿವೇಶನಗಳ ಹಂಚಿಕೆ ಸಂಬಂಧ ಬೋಗಸ್ ನೋಂದಣಿ ಕಾರ್ಡ್, ಅರ್ಜಿ, ಹಂಚಿಕೆ ಪತ್ರ, ಹಣ ಸಂದಾಯ ರಸೀದಿ, ಗುತ್ತಿಗೆ ಮತ್ತು ಕ್ರಯಪತ್ರ (ಎಲ್ಸಿಎಸ್ಎ), ಸ್ವಾಧೀನ ಪತ್ರ ಹಾಗೂ ಪ್ರಾಧಿಕಾರಕ್ಕೆ ಸಂಬಂಧಿಸಿದ ಇತರ ದಾಖಲಾತಿಗಳನ್ನು ಅಕ್ರಮವಾಗಿ ಸೃಷ್ಟಿಸಿ ದಾಖಲೆಗಳ ವಿಭಾಗದಲ್ಲಿ ಇರಿಸುತ್ತಿದ್ದರು.

ಶುದ್ಧ ಕ್ರಯಪತ್ರಕ್ಕೆಅರ್ಜಿ ಸಲ್ಲಿಸಿದಾಗ ಆಡಳಿತ ವಿಭಾಗದವರು ಮೂಲ ಕಡತ ಹಾಜರುಪಡಿಸುವಂತೆ ದಾಖಲು ವಿಭಾಗಕ್ಕೆ ಬೇಡಿಕೆ ಚೀಟಿ ಕಳುಹಿಸುತ್ತಿದ್ದರು. ಆಗ ದಾಖಲು ವಿಭಾಗದವರು, ಅಕ್ರಮವಾಗಿ ಸೃಷ್ಟಿಸಿದ ಕಡತವನ್ನು ಆಡಳಿತ ವಿಭಾಗಕ್ಕೆ ಕಳುಹಿಸುತ್ತಿದ್ದರು. ಹಾಗಾಗಿ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಈ ರೀತಿ ಬಿಡಿಎ ಹಂಚಿಕೆ ಮಾಡದೆಯೇ ಇರುವ ನಿವೇಶನಗಳಿಗೂ ಶುದ್ಧ ಕ್ರಯಪತ್ರಗಳನ್ನು ಸೃಷ್ಟಿಸಲಾಗುತ್ತಿತ್ತು ಎಂದು ಎಸ್ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

‘10 ವರ್ಷಗಳಿಂದ ನಡೆಯುತ್ತಿದೆ ಅಕ್ರಮ’
‘ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಡಿಎ ನಿವೇಶನಗಳನ್ನು ಪರಭಾರೆ ಮಾಡುವ ಹಗರಣ 10 ವರ್ಷಗಳಿಂದ ನಡೆಯುತ್ತಿದೆ. ಸಂಶಯ ಬಂದ ಎಲ್ಲ ಪ್ರಕರಣಗಳನ್ನೂ ತನಿಖೆಗೊಳಪಡಿಸುತ್ತಿದ್ದೇವೆ. ಕೆಂಗೇರಿ ಉಪನಗರ ಬಡಾವಣೆಯೊಂದರಲ್ಲೇ 100ಕ್ಕೂ ಅಧಿಕ ನಿವೇಶನಗಳಿಗೆ ಸಂಬಂಧಿಸಿ ಅಕ್ರಮ ನಡೆದಿರುವ ಶಂಕೆ ಇದೆ’ ಎಂದು ರಾಕೇಶ್ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಿರಿಯ ಅಧಿಕಾರಿ ಶಾಮೀಲು: ‘ಈ ಹಗರಣದಲ್ಲಿ ಕಿರಿಯ ಅಧಿಕಾರಿಯೊಬ್ಬರು ಶಾಮೀಲಾಗಿದ್ದಾರೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ.ಹಾಗಾಗಿ ಈ ಹಂತದಲ್ಲಿ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ’ ಎಂದು ತಿಳಿಸಿದರು.

ಇಬ್ಬರ ಬಂಧನ– ನಾಲ್ವರು ನಾಪತ್ತೆ
ಅರುಣ್ ಕುಮಾರ್ ನೀಡಿದ್ದ ದೂರಿನ ಅನ್ವಯ, ಅವರಿಗೆ ಅಕ್ರಮವಾಗಿ ನಿವೇಶನ ಮಾರಾಟ ಮಾಡಿದ್ದ ಎ.ಪಿ.ಕೃಷ್ಣಪ್ಪ ಹಾಗೂ ಕೃಷ್ಣೋಜಿರಾವ್, ರಮೇಶ್ ಅಲಿಯಾಸ್ ರಮೇಶ್ ಗೌಡ, ಪ್ರೇಮ್, ವಿಜಯ ಕುಮಾರ್, ರಾಜಶೇಖರ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಕೃಷ್ಣಪ್ಪ ಹಾಗೂ ಕೃಷ್ಣೋಜಿ ರಾವ್ ಅವರನ್ನು ಪೊಲೀಸರು ಬಂಧಿಸಿದ್ದರು. ಉಳಿದ ನಾಲ್ವರು ತಲೆ ಮರೆಸಿಕೊಂಡಿದ್ದರು ಎಂದು ಎಸ್ಟಿಎಫ್ನ ಪ್ರಕಟಣೆ ತಿಳಿಸಿದೆ.

‘ಆರೋಪಿಗಳು ಅಕ್ರಮ ದಾಖಲಾತಿ ಸೃಷ್ಟಿಸಿ ರಾಮನಗರ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ ಜನರಿಗೂ ಬಿಡಿಎ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ’ ಎಂದು ಎಸ್ಟಿಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ದಾಖಲೆ ನೈಜತೆ ಖಚಿತಪಡಿಸಿಕೊಳ್ಳಿ’
ಪ್ರಾಧಿಕಾರಕ್ಕೆ ಸೇರಿದ ನಿವೇಶನಗಳನ್ನು ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ನೋಂದಾಯಿಸಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಾಧಿಕಾರವು ಕೆಂಗೇರಿ ಉಪನಗರ ಬಡಾವಣೆಯಲ್ಲಿ ನಿವೇಶನ ಖರೀದಿ ಮಾಡಿದವರು ಅದರ ಹಂಚಿಕೆಯ ನೈಜತೆಯನ್ನು ಖಚಿತಪಡಿಸಿಕೊಳ್ಳುವಂತೆ ಸಲಹೆ ನೀಡಿದೆ.

‘ಲಭ್ಯವಿರುವ ಎಲ್ಲ ದಾಖಲಾತಿಗಳೊಂದಿಗೆ ಏಳು ದಿನಗಳ ಒಳಗೆ ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು’ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

‘107 ನಿವೇಶನ ಪ್ರಾಧಿಕಾರದ ಸ್ವತ್ತು’
‘ಕೆಂಗೇರಿ ಉಪನಗರ ಬಡಾವಣೆಯಲ್ಲಿ ಯಾರಿಗೂ ಹಂಚಿಕೆಯಾಗದ 107 ನಿವೇಶನಗಳು ಬಿಡಿಎ ಸ್ವಾಧೀನದಲ್ಲಿರಬೇಕಿದೆ. ಈ ಪೈಕಿ 37 ಬದಲಿ ನಿವೇಶನ ಹಂಚಿಕೆ ಬಳಿಕ ಹಿಂತಿರುಗಿಸಲಾದ ನಿವೇಶನಗಳು. ಬೋಗಸ್ ದಾಖಲೆ ಸೃಷ್ಟಿಸಿ ಇವುಗಳನ್ನು ಮಾರಾಟ ಮಾಡಲಾಗಿದೆ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮೂಲದಾಖಲೆಗಳ ಪ್ರಕಾರ ಪ್ರಾಧಿಕಾರದ ವಶದಲ್ಲಿರುವ ನಿವೇಶನಗಳನ್ನು ಗುರುತಿಸಿ ಶೀಘ್ರವೇ ಬೇಲಿ ಹಾಕಲಿದ್ದೇವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.