ಸೋಮವಾರ, ಜೂಲೈ 6, 2020
22 °C

ಬೆಂಗಳೂರಿನಿಂದ 75 ವಿಮಾನಗಳ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಕ ಮಂಗಳವಾರ 75 ವಿಮಾನಗಳು ಸಂಚಾರ ನಡೆಸಿದವು. 

ಇಂಡಿಗೊ, ಏರ್‌ ಇಂಡಿಯಾ ಸೇರಿದಂತೆ ಕೆಲವು ವಿಮಾನಯಾನ ಸಂಸ್ಥೆಗಳ ವಿಮಾನಗಳು ಕಾರ್ಯಾಚರಣೆ ನಡೆಸಿದವು. ಮಂಗಳವಾರ ಸಂಜೆಯವರೆಗೆ ನಗರದಿಂದ 35 ವಿಮಾನಗಳು ಬೇರೆ ರಾಜ್ಯಗಳಿಗೆ ತೆರಳಿದವು. ಬೇರೆ ರಾಜ್ಯ ಮತ್ತು ನಗರಗಳಿಂದ 40 ವಿಮಾನಗಳು ಕೆಐಎಗೆ ಬಂದಿಳಿದವು. ಇವುಗಳಲ್ಲಿ ಸುಮಾರು 700ಕ್ಕೂ ಹೆಚ್ಚು ಪ್ರಯಾಣಿಕರು ಬಂದಿಳಿದಿದ್ದು, ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಮಂಗಳವಾರ ಕೂಡ ಕೆಐಎದಿಂದ 32 ವಿಮಾನಗಳ ಸಂಚಾರ ಕಾರಣಾಂತರಗಳಿಂದ ರದ್ದಾಗಿದೆ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು