ಮಂಗಳವಾರ, ಮೇ 11, 2021
27 °C

ಆಟಿಕೆ ಮಾರಾಟ ಮಾಫಿಯಾ: ಹೈಕೋರ್ಟ್‌ಗೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದ 432 ಸ್ಥಳಗಳಲ್ಲಿ ಆಟಿಕೆ ಮಾರಾಟ ಮಾಡುವ 886 ಮಕ್ಕಳಿದ್ದು, ಭಿಕ್ಷಾಟಣೆಗೆ ಅವರನ್ನು ಮಾಫಿಯಾ ತಳ್ಳುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ’ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್‌ಗೆ ವಿವರ ಸಲ್ಲಿಸಿದೆ.

ನಗರದಲ್ಲಿ ದುರ್ಬಲ ಮಕ್ಕಳ ಸಮೀಕ್ಷೆ ನಡೆಸಲು ಸ್ವಯಂ ಸೇವಕರು ಮತ್ತು ಅಧಿಕಾರಿಗಳ ತಂಡ ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಕೆಎಸ್ಎಲ್‌ಎಸ್‌ಎಗೆ ನಿರ್ದೇಶನ ನೀಡಿತ್ತು.

ನಗರದಲ್ಲಿ ಆಟಿಕೆ ಮಾರಾಟ ಮಾಡಲು ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಇರಿಸಲಾಗಿದೆ. ಅವರಿಗೆ ಪುನರ್ವಸತಿ ಕಲ್ಪಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಲೆಟ್ಜ್‌ಕಿಟ್‌ ಫೌಂಡೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಕಾನೂನು ಕಾಲೇಜು ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಒಳಗೊಂಡ ತಂಡವನ್ನು ಕೆಎಸ್ಎಲ್‌ಎಸ್‌ಎ ರಚಿಸಿತ್ತು. 886 ಮಕ್ಕಳಲ್ಲಿ 720 ಮಕ್ಕಳ ಮಾಹಿತಿ ಸಂಗ್ರಹಿಸಲಾಗಿದೆ. ವಲಯವಾರು ಮಾಹಿತಿಯನ್ನು ಕೆಎಸ್‌ಎಲ್‌ಎಸ್‌ಎ ನೀಡಿದೆ. ಇವರಲ್ಲಿ 27 ಮಕ್ಕಳನ್ನು ಮಾಫಿಯಾ ಭಿಕ್ಷಾಟನೆಗೆ ದೂಡಿದೆ ಎಂದು ವರದಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.