ಬೆಂಗಳೂರು: ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್, ನಾಯಕತ್ವ ಪ್ರಶಸ್ತಿ ಹಾಗೂ ಏಷ್ಯಾ ಪೆಸಿಫಿಕ್ ಎಚ್ಆರ್ಎಂ ಕಾಂಗ್ರೆಸ್ ಪ್ರಶಸ್ತಿಗಳಿಗೆ ಕೆಎಸ್ಆರ್ಟಿಸಿ ಭಾಜನವಾಗಿದೆ.

ಅತ್ಯುತ್ತಮ ಪ್ರಯಾಣಿಕರ ಸ್ನೇಹಿ, ವಿವಿಧ ಬಸ್ಸುಗಳ ಬ್ರ್ಯಾಂಡಿಂಗ್, ಜನಸ್ನೇಹಿ ನಿರ್ವಹಣೆಗಾಗಿ ಕೆಎಸ್ಆರ್ಟಿಸಿ ಭಾರತದ ಅತ್ಯುತ್ತಮ ಸಾರಿಗೆ ಕಂಪನಿ ಪ್ರಶಸ್ತಿ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಸ್ಥೆ ಪ್ರಶಸ್ತಿಯನ್ನು ಮುಂಬೈನ ರಾಡಿಸನ್ ಹೋಟೆಲ್ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಕೆಂಪೇಗೌಡ ಬಸ್ ನಿಲ್ದಾಣದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ ಎಸ್.ಎನ್. ಹಾಗೂ ಪ್ರಾದೇಶಿಕ ಕಾರ್ಯಾಗಾರದ ವ್ಯವಸ್ಥಾಪಕ ಎಂ.ನವೀನ್ ನಿಗಮದ ಪರವಾಗಿ ಪ್ರಶಸ್ತಿ ಸ್ಡೀಕರಿಸಿದರು.

ನೌಕರರ ಕಲ್ಯಾಣ ಕಾರ್ಯಕ್ರಮಗಳು, ತಂತ್ರಜ್ಞಾನ ಆಧಾರಿತ ಮಾನವ ಸಂಪನ್ಮೂಲ ಕ್ರಮಗಳು ಹಾಗೂ ನಿರಂತರ ನವೀನತೆಯೊಂದಿಗೆ ಮಾನವ ಸಂಪನ್ಮೂಲ ನಿರ್ವಹಣೆಗಾಗಿ ಏಷ್ಯಾ ಫೆಸಿಪಿಕ್ ಎಚ್ಆರ್ಎಂ ಕಾಂಗ್ರೆಸ್ ಪ್ರಶಸ್ತಿಗೆ ಕೆಎಸ್ಆರ್ಟಿಸಿ ಆಯ್ಕೆಯಾಗಿದ್ದು, ಬೆಂಗಳೂರಿನಲ್ಲಿ ನಡೆದ ನಾಲ್ಕನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮದ ಉಪ ಮುಖ್ಯ ಕಾನೂನು ಅಧಿಕಾರಿ ಶ್ಯಾಮಲಾ, ಕೇಂದ್ರ ಕಚೇರಿಯ ಕಾನೂನು ಅಧಿಕಾರಿ ಶಕುಂತಲಾ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.