‘ಮಂತ್ರಿ ಮಾಲ್ ಮೂರು ವರ್ಷಗಳಿಂದ ₹ 30 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಮಾಲ್‌ನಲ್ಲಿರುವ ಮಳಿಗೆಗಳ ಮಾಲೀಕರಿಗೆ ಕಳೆದ ವಾರನೋಟಿಸ್ ನೀಡಿದ್ದೆವು. ಬುಧವಾರ ಮಳಿಗೆಗಳಿಗೆ ತೆರಳಿ ತೆರಿಗೆ ಪಾವತಿಸುವಂತೆ ಮತ್ತೊಮ್ಮೆ ಸೂಚನೆ ನೀಡಿದ್ದೇವೆ. ಇನ್ನು ವಾರದೊಳಗೆ ಬಾಕಿ ತೆರಿಗೆ ಪಾವತಿಸದೇ ಹೋದರೆ ಮಾಲ್‌ನಲ್ಲಿರುವ ಎಲ್ಲ ಮಳಿಗೆಗಳಿಗೆ ಬೀಗಮುದ್ರೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದೇವೆ’ ಎಂದು ಪಶ್ಚಿಮ ವಲಯದ ಉಪಾಯುಕ್ತ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.